ಆ.20 ರಂದು ಗಾಣಿಗ ಸಮಾಜದ ಸನ್ಮಾನ ಸಮಾರಂಭ

ಹುಬ್ಬಳ್ಳಿ,ಅ16 ಅಖಿಲ ಭಾರತ ಗಾಣಿಗ ಸಂಘದ ವತಿಯಿಂದ ಸನ್ಮಾನ ಸಮಾರಂಭವನ್ನು ಇದೆ ಆ. 20 ರವಿವಾರದಂದು ನಗರದ ಗೋಕುಲ ರೋಡಿನ ಚವ್ಹಾಣ ಗಾರ್ಡನ್ ನಲ್ಲಿ ನಡೆಸಲಾಗುತ್ತದೆ ಎಂದು ಸಂಘದ ಗೌರವಾಧ್ಯಕ್ಷರಾದ ಶೇಖರ ಡಿ ಸಜ್ಜನರ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಮಂತ್ರಿಗಳನ್ನು ಮತ್ತು ಗಣ್ಯವ್ಯಕ್ತಿಗಳನ್ನು ಈ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಸಮಾಜಕ್ಕೆ ಆಗುತ್ತಿರುವ ಅನೇಕ ಕುಂದು ಕೊರತೆಗಳನ್ನು ನಿವಾರಿಸಲು ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯುತ್ತೆವೆ ಎಂದು ತಿಳಿಸಿದರು. 1995ರಲ್ಲಿ ಅಖಿಲ ಭಾರತ ಗಾಣಿಗ ಸಂಘವು ಹುಬ್ಬಳ್ಳಿಯಲ್ಲಿ ಲಿಂ. ಶಿವಪ್ಪನವರು ಜಿಗಳೂರ ಇವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿದ್ದು ಸಂಘಟನೆ, ಶಿಕ್ಷಣ, ಉದ್ಯೋಗ ವಿಷಯಗಳಲ್ಲಿ ಜನ ಜಾಗೃತಿ ಮೂಡಿಸುತ್ತಿದೆ ಎಂದರು.
ಈ ಸಮಾರಂಭಕ್ಕೆ ರಾಜ್ಯದ ಎಲ್ಲಾ ಗಾಣಿಗ ಸಮಾಜದ ಜನರು ಈ ಮಹಾ ಸಮಾರಂಭದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಮಲ್ಲಿಕಾರ್ಜುನ ಲೋಣಿ, ಅಧ್ಯಕ್ಷರು ಗುರಣ್ಣಾ ಗೋಡಿ, ಪ್ರಧಾನ ಕಾರ್ಯದರ್ಶಿ ಪಿ.ಎಂ.ತಟ್ಟಿಮನಿ ಉಪಸ್ಥಿತರಿದ್ದರು.

Leave a Comment