ಆ 17 ರಿಂದ ಆರ್ಟ್ ಆಫ್ ಲಿವಿಂಗ್ ಧ್ಯಾನ ಶಿಬಿರ

ಬಳ್ಳಾರಿ, ಆ 13 : ನಗರದ ಹಾನಗಲ್ಲ ಕುಮಾರೇಶ್ವರ ಸಮುದಾಯ ಭವನದಲ್ಲಿ ಆನಂದದ ಅನುಭೂತಿಯ ಧ್ಯಾನ ಶಿಬಿರವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಮ್ಮಿಕೊಂಡಿದೆ ಎಂದು ಧ್ಯಾನ ಶಿಕ್ಷಕಿ ಪುಷ್ಪ ಹೇಳಿದ್ದಾರೆ.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ17 ರಿಂದ 19 ರ ವರೆಗೆ ಸಂಜೆ 5 ರಿಂದ ರಾತ್ರಿ 8.15 ರ ವರೆಗೆ ಧ್ಯಾನ ಶಿಬಿರ ನಡೆಯಲಿದೆ. ಬೆಂಗಳೂರು ಅಂತರಾಷ್ಟ್ರೀಯ ಆಶ್ರಮದಿಂದ ರವಿಶಂಕರ ಗುರುಜೀಯವರಿಂದ ಮೂರು ದಿನಗಳ ಕಾಲ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಶಿಬಿರದಲ್ಲಿ ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳುವ ಬಗ್ಗೆ, ಆರೋಗ್ಯವನ್ನು ಸುಧಾರಿಸಿಕೊಂಡು ವ್ಯಕ್ತಿಗತ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಉಪಯುಕ್ತವಾಗುವ ನಿಟ್ಟಿನಲ್ಲಿ ತಿಳಿಸಿಕೊಡಲಾಗುತ್ತಿದೆ.

ಶಿಬಿರವನ್ನು ಕೊಟ್ಟೂರು ಮಠದ ಡಾ. ಸಂಗನಬಸವ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಭರತ್ ಕುಮಾರ್, ಡಾ. ಮಾಣಿಕ್ಯ ರಾವ್, ಶೈಲಜಾ ಇದ್ದರು.

Leave a Comment