ಆ. 16 ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭ

ದಾವಣಗೆರೆ, ಆ. 13- ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆ. 16 ರಂದು ಬೆಳಗ್ಗೆ 11 ಕ್ಕೆ ನಗರದ ಶ್ರೀಮದ್ ಅಭಿನವ ರೇಣುಕಾಮಂದಿರದಲ್ಲಿ 2017-18 ಹಾಗೂ 2018-19ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಶ್ರೀ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರುಗಳಾದ ಎನ್.ತಿಪ್ಪಣ್ಣ, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್.ಗಣೇಶ್ ಆಗಮಿಸಲಿದ್ದಾರೆ. ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್ ಸಿ ಹಾಗೂ ಪಿಯುಸಿಯ 530 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ, 2017-18ನೇ ಸಾಲಿಗೆ 260 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು 1500 ರೂ ಚೆಕ್ ಹಾಗೂ ಬೆಳ್ಳಿಚೌಕ ವಿತರಿಸಲಾಗುವುದು. 2018-19ನೇ ಸಾಲಿಗೆ ಆಯ್ಕೆಯಾದ 270 ವಿದ್ಯಾರ್ಥಿಗಳಿಗೆ 2000 ರೂ ಚೆಕ್ ನೀಡಲಾಗುತ್ತಿದೆ ಎಂದರು. ಮಹಾಸಭಾದಿಂದ ನೆರೆ ಸಂತ್ರಸ್ಥರಿಗೆ ನೆರವು ನೀಡುವ ಉದ್ದೇಶ ಹೊಂದಿದ್ದು, ಗದಗ, ಬಾಗಲಕೋಟೆಯ ಜಿಲ್ಲಾಧ್ಯಕ್ಷರುಗಳನ್ನು ಸಂಪರ್ಕಿಸಿ ಅಗತ್ಯವಿರುವ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಂಡು ಸಂತ್ರಸ್ಥರಿಗೆ ತಲುಪಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಕರೇಶಿವಪ್ಳ ಸಿದ್ದೇಶ್, ಪ್ರಭು ಕಲ್ಬುರ್ಗಿ, ಬಾದಾಮಿ ಮಲ್ಲಿಕಾರ್ಜುನ್, ಆರ್.ಟಿ.ಪ್ರಶಾಂತ್, ಅಶೋಕ್ ಕುಮಾರ್,ಟಿಂಕರ್ ಮಂಜಣ್ಣ, ವಸಂತ್ ಶಾಮನೂರು, ದೊಗ್ಗಳ್ಳಿ ಸುವರ್ಣಮ್ಮ ಉಪಸ್ಥಿತರಿದ್ದರು.

Leave a Comment