ಆ.15ರ ವಾಲ್ಮೀಕಿ ನಾಯಕ ಸಮಾಜದ ರ್ಯಾಲಿ ನಿಲ್ಲದು: ನಂದಕುಮಾರ

ಕಲಬುರಗಿ,ಆ.11- ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಇದೇ ಆ.15ರಂದು ಬೃಹತ ಪ್ರತಿಭಟನಾ ರ್ಯಾಲಿಯ ಮೂಲಕ ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೈ.ಕ.ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಅಧ್ಯಕ್ಷ ನಂದಕುಮಾರ ಪಾಟೀಲ ಇಂದಿಲ್ಲಿ ಹೇಳಿದರು.

ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜದ ಬಗ್ಗೆ ತಮಗೆ ಅಪಾರ ಗೌರವಿದ್ದು, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಈ ಹೋರಾಟವನ್ನು ಸಂಘಟಿಸಲಾಗಿದೆ. ಶ್ರೀಮಹರ್ಷಿ ವಾಲ್ಮೀಕಿ ಸಂಸ್ಥಾನದ ಪೂಜ್ಯ ಪ್ರಸಸನ್ನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಆಗಿರುವ ಹಾಗೂ ಆಗುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗದ ಕಾರಣ ಈ ರ್ಯಾಲಿಯನ್ನು ಸಂಘಟಿಸಲಾಗಿದೆ ಎಂದರು.

ಹಿಂದುಳಿದ ವರ್ಗ:2ಎ ರಲ್ಲಿ ಬರುವ ಈ ಭಾಗದ ಕುರುಬ ಹಾಗೂ ಧನಗಾರ ಜನಾಂಗದವರು ಗೊಂಡ, ಕಾಡು ಕುರುಬ, ರಾಜಗೊಂಡ ಹೆಸರಿನಲ್ಲಿ ಮತ್ತು ಪ್ರವರ್ಗ-1 ರಲ್ಲಿ ಬರುವ ಕಬ್ಬಲಿಗ ಜಾತಿಯ ಟೊಕ್ರಿ, ಕೋಳಿ ಜಾತಿಯ ಹೆಸರಿನಲ್ಲಿ ಸುಳ್ಳು ಎಸ್ಟಿ ಪ್ರಮಾಣ ಪಡೆಯುತ್ತಿದ್ದಾರೆ ಇದರಿಂದಾಗಿ ಮೂಲ ಪರಿಶಿಷ್ಟ ಪಂಗಡದವರಿಗೆ ಅನ್ಯಾಯ ಮತ್ತು ವಂಚನೆ ಮಾಡಲಾಗುತ್ತಿದೆ ಇದನ್ನು ಖಂಡಿಸಿ ಆ.15ರಂದು ನಡೆಸಲು ಉದ್ದೇಶಿಸಿರುವ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗಾಗಿರುವ ಅನ್ಯಾಯದ ಬಗ್ಗೆ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದ್ದೆ ಇರುತ್ತದೇ ಆದರೆ ನಮ್ಮ ಹೋರಾಟ ಹಿಂದಕ್ಕೆ ಪಡೆಯುವಂತೆ ಬೆದರಿಕೆ ಮತ್ತು ಒತ್ತಡ ಹಾಕುತ್ತಿರುವುದು ನ್ಯಾಯಸಮ್ಮತವಲ್ಲ ವಾಲ್ಮೀಕಿ. ನಾಯಕ ಸಮಾಜದ ವಿರುದ್ದ ಮಾಡಿರುವ ಆರೋಪ ಹಾಗೂ ಬೆದರಿಕೆಯ ಬಗ್ಗೆ ಕಾನೂನು ಸಮರ ಕೈಗೊಳ್ಳಲು ಸಂಘ ಚಿಂತಿಸುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆ.15ರಂದು ಬೆಳಿಗ್ಗೆ 11ಕ್ಕೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೂ ಪ್ರತಿಭಟನಾ ಮೆರವಣಿಗೆ ಕೈಗೊಂಡು ಸರ್ಕಾರಕ್ಕೆ ಬೇಡಿಕೆಯ ಮವನಿ ಪತ್ರವನ್ನು ಸಲ್ಲಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಶರಣು ಬಿ.ಸುಬೇದಾರ, ಶ್ರವಣಕುಮಾರ ಡಿ,ನಾಯಕ, ಬಾಬುರಾವ ಬಡಿಗೇರ ಸೇರಿದಂತೆ ಹಲವರಿದ್ದರು…

Leave a Comment