ಆ.12 ರಂದು ಭಾವಸಂಗಮ ಕಾರ್ಯಕ್ರಮ

ದಾವಣಗೆರೆ, ಆ. 9 – ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಸಮಾಚಾರ ಪತ್ರಿಕಾ ಬಳಗದಿಂದ ಆ. 12 ರಂದು ಸಂಜೆ 6 ಕ್ಕೆ ಭಾವಸಂಗಮ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಬಳಗದ ಪ್ರಧಾನ ಕಾರ್ಯದರ್ಶಿ ಸಿ.ಕೆ.ಆನಂದತೀರ್ಥಾಚಾರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಹೆಸರಾಂತ ಕಾದಂಬರಿಕಾರರಾದ ಮೈಸೂರಿನ ಪ್ರೊ.ಮಲೇಯೂರು ಗುರುಸ್ವಾಮಿ ರಚಿಸಿರುವ ಕಪಿಲೆ ಹರಿದಳು ಕಡಲಿಗೆ ಎಂಬ ವೈಶಿಷ್ಟಪೂರ್ಣ ಕಾದಂಬರಿ ಕುರಿತ ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದೆ. ಕನ್ನಡದ ನೆಲದಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಖ್ಯಾತಿ ಪಡೆದ ಸಂಗೀತ ಸಾಧಕಿಯೊಬ್ಬರ ಜೀವನಾಧಾರಿತ ಕಾದಂಬರಿ ಇದು. ಲೇಖಕರು ಈ ಕಾದಂಬರಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ 22 ಕೆರೆಗಳ ಹೋರಾಟ ಸಮಿತಿ ಸಂಚಾಲಕ ಡಾ.ಜಿ.ಮಂಜುನಾಥ ಗೌಡ ಚಾಲನೆ ನೀಡಲಿದ್ದಾರೆ. ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಪುಸ್ತಕ ಕುರಿತು ಮಾತನಾಡಲಿದ್ದಾರೆ, ದಾವಣಗೆರೆ ವಿವಿ ಉಪಕುಲಪತಿ ಡಾ.ಶರಣಪ್ಪ ಹಲಸೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಗದ ಸಂಸ್ಥಾಪಕ ವಿ.ಹನುಮಂತಪ್ಪ, ಗೌರವಾಧ್ಯಕ್ಷ ಎನ್.ಟಿ.ಎಱ್ರಿಸ್ವಾಮಿ,ಅಧ್ಯಕ್ಷ ಹೆಚ್.ಎನ್.ಪ್ರದೀಪ್ ಉಪಸ್ಥಿತರಿರುವರು. ನಂತರ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹೇಮಚಂದ್ರಜೈನ್, ಶ್ರೀಕುಮಾರ ಆನೆಕೊಂಡ, ಎನ್.ಕೆ.ಕೊಟ್ರೇಶ್ ಇದ್ದರು.

Leave a Comment