ಆಹಾರ ಪದ್ಧತಿ ಬಗ್ಗೆ ಇರಲಿ ಎಚ್ಚರ

ನಮ್ಮ ದೇಹಗಳು ಅಸಾಧಾರಣವಾದ ಯಂತ್ರಗಳಿದ್ದಂತೆ. ಇವುಗಳನ್ನು ಸೂಕ್ತವಾದ ಸಮತೋಲಿತ ಆಹಾರ ಪದ್ಧತಿಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಸೂಕ್ತವಾದ ಮತ್ತು ಅಗತ್ಯವಿರುವಷ್ಟು ಆಹಾರ ಪದಾರ್ಥಗಳ ಆಯ್ಕೆಯನ್ನು ಮಾಡಿಕೊಂಡು ಸೇವಿಸಿದರೆ ಮಾತ್ರ ನಿಮ್ಮ ದೇಹ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಸೇವನೆ ಮಾಡಿದ ಆಹಾರ ಪದಾರ್ಥಗಳಲ್ಲಿ ಯಥೇಚ್ಚವಾಗಿರುವ ಟಾಕ್ಸಿನ್ ಅಂಶಗಳು ಅಂದರೆ ವಿಷಾಣುಗಳಿಂದ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ. ಇದನ್ನು ಶುದ್ಧಿ ಮಾಡಲು ಡಿಟಾಕ್ಸಿಫೈಯಿಂಗ್(ನಿರ್ವಿಶೀಕರಣ) ನೆರವಾಗುತ್ತದೆ. ಈ ಡಿಟಾಕ್ಸ್ ಆಹಾರ ಪದ್ಧತಿಯು ದೇಹದಲ್ಲಿನ ಟಾಕ್ಸಿನ್‌ಗಳನ್ನು ಹೊರಹಾಕಲು ನೆರವಾಗುತ್ತದೆ ಎಂಬುದಕ್ಕೆ ಸಾಕ್ಷಿಗಳಿವೆ. ಆದಾಗ್ಯೂ, ಈ ಟಾಕ್ಸಿನ್ ಅಂಶಗಳನ್ನು ಫಿಲ್ಟರ್ ಮಾಡಿ ಹೊರ ಹಾಕುವಲ್ಲಿ ಮೂತ್ರಪಿಂಡಗಳು ಮತ್ತು ಲಿವರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಬಿಜಿಎಸ್ ಆಸ್ಪತ್ರೆ ಕಾರ್ತಿಗೈಸೆಲ್ವಿ ತಿಳಸಿದ್ದಾರೆ.

ಆಹಾರ ಪದ್ಧತಿಯ ಟಿಪ್ಸ್
*ಸಂಸ್ಕರಿಸಿದ ಆಹಾರವನ್ನು ನಿಯಂತ್ರಿಸಿ ಮತ್ತು ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸಲು ಪ್ರಯತ್ನಿಸಿ.
*ಕೊಬ್ಬಿನ ಅಂಶವನ್ನು ಹೆಚ್ಚು ಮಾಡಿ ತೂಕವನ್ನು ಹೆಚ್ಚಿಸಲು ಕಾರಣವಾಗುವ ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪವನ್ನು ತ್ಯಜಿಸಿ.
*ಪ್ರತಿದಿನ ವ್ಯಾಯಾಮವನ್ನು ಮಾಡಿ. ೪೫ ನಿಮಿಷದಿಂದ ೧ ಗಂಟೆವರೆಗೆ ವ್ಯಾಯಾಮ ಅಥವಾ ವಾಕ್ ಮಾಡಿ. ಇದರಿಂದ ತೂಕ ಕಡಿಮೆಯಾಗುತ್ತದೆ. ಅಲ್ಲದೇ, ಮೆಟಾಬಾಲಿಕ್ ಮಟ್ಟಗಳನ್ನು ಹೆಚ್ಚಿಸುತ್ತದೆ.
*ಸಿಟ್ರಸ್ ಅಂಶವಿರುವ ಕಿತ್ತಳೆ, ಮೂಸಂಬಿ ಮತ್ತು ನಿಂಬೆ ಹಣ್ಣುಗಳನ್ನು ಸೇವಿಸಿ. ಸಕ್ಕರೆ, ಬೆಲ್ಲ ಅಥವಾ ಜೇನುತುಪ್ಪ ಬೆರೆಸದೇ ಈ ಹಣ್ಣುಗಳನ್ನು ಸೇವಿಸಿ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಿರಿ.
*ಪ್ರತಿದಿನ ಆಹಾರದಲ್ಲಿ ಅಥವಾ ನೀರು, ಚಹಾ, ಮಜ್ಜಿಗೆಯಲ್ಲಿ ಶುಂಠಿ, ಪುದೀನ, ಜೀರಾ, ಮೆಣಸು, ಅರಿಶಿಣ ಪುಡಿ, ಅಜ್ವಾನವನ್ನು ಸೇರಿಸಿ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ಜೀರ್ಣಶಕ್ತಿ ಹಾಗೂ ಡಿಟಾಕ್ಸಿಫಿಕೇಶನ್ ಉತ್ತಮವಾಗುತ್ತದೆ.
* ಹೆಚ್ಚು ತರಕಾರಿಗಳನ್ನು ಸೇವಿಸುವುದರಿಂದ ಫೈಬರ್ ಅಂಶವನ್ನು ಹೆಚ್ಚು ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚು ಮಾಡಿ, ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಅತಿಯಾದ ಆಹಾರವನ್ನು ಸೇವನೆ ಮಾಡುವುದನ್ನು ನಿಯಂತ್ರಿಸುತ್ತದೆ.
* ಹಾಲು, ಮೊಸರು. ಸೋಯಾ, ದ್ವಿದಳ ಧಾನ್ಯಗಳು, ಟೊಫು, ಪನ್ನೀರು, ಆಲ್ಮಂಡ್‌ಗಳು ಮತ್ತು ಧಾನ್ಯಗಳಂತಹ ನೈಸರ್ಗಿಕ ಪ್ರೊಟೀನ್ ನೀಡುವಂತಹ ಪದಾರ್ಥಗಳನ್ನು ಸೇವನೆ ಮಾಡಿ. ಇದಲ್ಲದೇ, ಕಂಬೈನ್ಡ್ ಫುಡ್, ಮೊಟ್ಟೆಯ ಬಿಳಿಯ ಭಾಗ, ಮೀನು, ಚಿಕನ್ ಅನ್ನು ಅತ್ಯಲ್ಪ ಎಣ್ಣೆಯಲ್ಲಿ ಬೇಯಿಸಿ ತಿಂದರೆ ಒಳ್ಳೆಯದು. ಇವುಗಳನ್ನು ಬೇಯಿಸಿ, ಸ್ಟೀಮಿಂಗ್ ಮಾಡಿ ಅಥವಾ ಗ್ರೇವಿ ರೂಪದಲ್ಲಿ ತಿನ್ನಬಹುದು. ಆಕ್ಟಿವೇಟೆಡ್ ಚಾರ್ಕೋಲ್ ಅಥವಾ ಜ್ಯೂಸ್ ಅನ್ನು ಯಾವುದೇ ಕಾರಣನ್ನೂ ಸೇವಿಸಬೇಡಿ. ಸುಸ್ಥಿರವಾದ ಪದ್ಧತಿಗಳನ್ನು ಅನುಸರಿಸುವ ಬದಲು ನಿಮ್ಮ ದೇಹಕ್ಕೆ ಪೌಷ್ಠಿಕಾಂಶ ಇರುವ ಆಹಾರ ಪದಾರ್ಥಗಳನ್ನು ನೀಡಿ. ಆರೋಗ್ಯಕಾರಿ ಆಹಾರದಿಂದ ಲಿವರ್ ಮತ್ತು ಮೂತ್ರಪಿಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಲಿವೆ. ಇದರಿಂದ ನಿಮ್ಮ ದೇಹವನ್ನು ಒಳಗೆ ಮತ್ತು ಹೊರಗೆ ಆರೋಗ್ಯವಾಗಿಡುತ್ತದೆ.
* ಸಕ್ಕರೆಯನ್ನು ಮಿಶ್ರಣ ಮಾಡದೇ ದ್ರವರೂಪದ ಆಹಾರಗಳನ್ನು ಹೆಚ್ಚು ಸೇವನೆ ಮಾಡಬೇಕು. ಎಳನೀರು, ಮಜ್ಜಿಗೆಯಂತಹ ದ್ರವಗಳನ್ನು ಸೇವಿಸಬೇಕು. ಇದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ಪಾರು ಮಾಡಬಹುದು.
* ಸಮತೋಲಿತ ಆಹಾರ ಪದ್ಧತಿಯೊಂದಿಗೆ ವ್ಯಾಯಾಮವನ್ನು ಅಳವಡಿಸಿಕೊಂಡರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ವಿಶೇಷವಾಗಿ ಹಬ್ಬದ ನಂತರ ತೂಕವನ್ನು ಇಳಿಸಲು ನೆರವಾಗುತ್ತದೆ.

Leave a Comment