ಆಹಾರಮೇಳ ಪ್ರಚಾರಕ್ಕೆ ಚಾಲನೆ

ಮೈಸೂರು, ಸೆ. 13-ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುವ ಜನಪ್ರಿಯ ಆಹಾರ ಮೇಳದ ಪ್ರಚಾರಕ್ಕಾಗಿ ಇದೇ ಮೊದಲ ಭಾರಿಗೆ ದಸರಾ ಸಮಿತಿ ಸ್ತಬ್ದಚಿತ್ರ ಪ್ರಚಾರಕ್ಕೆ ಮುಂದಾಗಿದ್ದು, ಈ ಪ್ರಚಾರ ಸ್ತಬ್ದಚಿತ್ರಕ್ಕೆ ಇಂದು ಚಾಲನೆ ನೀಡಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳಾದ ಡಿ. ರಂದೀಪ್ ಅವರು ಆಹಾರ ಮೇಳದ ಪ್ರಚಾರದ ಸ್ತಬ್ದಚಿತ್ರಕ್ಕೆ ಚಾಲನೆ ನೀಡಿದರು. ಈ ವೇಳೆ ಸಾಂಸ್ಕೃತಿಕ ಕಲಾ ತಂಡ ನಗಾರಿ ಈ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಇನ್ನು ಈ ಪ್ರಚಾರ ಸ್ತಬ್ದಚಿತ್ರವು ಅಂಭಾರಿ ಹೊತ್ತ ಆನೆಯಂತೆ ಬುಟ್ಟಿಯಲ್ಲಿ ತುಂಬಿದಂತಹ ಆಹಾರ ಹೊತ್ತ ಆನೆ ಹಾಗೂ ಮಾವುತ ಜಾಗದಲ್ಲಿ ರೀತಿ ಅಡುಗೆ ಬಟ್ಟ ಕೂತಿರುವ ಕಲಾಕೃತಿ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಇದೇ ಪ್ರಥಮ ಬಾರಿಗೆ ಆಹಾರಮೇಳದ ಸ್ತಬ್ಧ ಚಿತ್ರವನ್ನು ಪ್ರಚಾರಕ್ಕೆ ಕಳುಹಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ತೆರಳುವ ಈ ವಾಹನ ವಿಶೇಷತೆಯಿಂದ ಕೂಡಿದ್ದು, ಆಹಾರಮೇಳದಲ್ಲಿ ದೊರೆಯುವ ಎಲ್ಲಾ ರೀತಿಯ ತಿಂಡಿ-ತಿನಿಸು, ಸಿಹಿ ಆಹಾರ ಸೇರಿದಂತೆ ಇನ್ನಿತ್ತರ ಖಾದ್ಯಗಳ ಬಗ್ಗೆ ಜನರಿಗೆ ತಿಳಿಸಲಾಗುವುದು. ಇದೊಂದು ಹೊಸ ಪ್ರಯತ್ನವಾಗಿದ್ದು, ದಸರಾ ಮಹೋತ್ಸವಕ್ಕೆ ಗ್ರಾಮೀಣ ಜನರನ್ನು ಆಕರ್ಷಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಉಪಸ್ಥಿತರಿದ್ದರು.

Leave a Comment