ಆಸ್ಪತ್ರೆಗಳಲ್ಲಿಲ್ಲ ಜನಗಳ ಅಂತರ

ಬಳ್ಳಾರಿ, ಮಾ.26: ಕೊರೊನಾ ತಡೆಯಲು ನಗರದ ಕಿರಾಣಿ ಅಂಗಡಿ, ಸೂಪರ್ ಮಾರ್ಕೆಟ್, ಮೆಡಿಕಲ್ ಸ್ಟೋರ್ ಗಳ ಮುಂದೆ ಕಂಡು ಬರುತ್ತಿರುವ ಜನರ ನಡುವಿನ ಅಂತರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇಲ್ಲದಾಗಿದೆ.
ಆಸ್ಪತ್ರೆಗೆ ಬಂದವರು ರೋಗಿಗಳ ಸಂಬಂಧಿಕರು ಆವರಣದಲ್ಲಿ ಗುಂಪು ಗುಂಪಾಗಿ ಮಾಸ್ಕ್ ಗಳಿಲ್ಲದೆ ಗಿಡದ ಕೆಳಗೆ ಕುತಿದ್ದಾರೆ.

ಅದಲ್ಲದೆ ಮುಖ್ಯದ್ವಾರದಿಂದ ಒಳಗೆ ಹೋಗುವವರನ್ನು ಸಾಲಾಗಿ ನಿಲ್ಲಿಸಿ ಕಳುಹಿಸಲಾಗುತ್ತಿದೆ. ಆದರೆ ಸಾಲಾಗಿ ನಿಂತವರಲ್ಲಿ ಅಂತರ ಇಲ್ಲದೆ ಒಬ್ಬರಿ ಗೊಬ್ಬರು ತಾಕಿಕೊಂಡು ನಿಂತಿದ್ದು ಇಂದು ಕಂಡು ಬಂತು. ಅವರಲ್ಲೂ ಅನೇಕ ಜನ ಮಾಸ್ಕ್ ಧರಿಸಿರಲಿಲ್ಲ. ಇನ್ನು ಒಳಗಡೆಯೂ ರೋಗಿಗಳು ಅವರ ಹಿಂದೆ ಬಂದವರು ಗುಂಪಾಗಿ ಇದ್ದುದು ಓಡಾಡುತ್ತಿದ್ದುದು ಕಂಡು ಬಂತು.
ಹೊರಗಡೆ ಹಲವು ರೀತಿಯಲ್ಲಿ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾಡಳಿತ ಆಸ್ಪತ್ರೆಗಳ ಬಳಿಯೂ ವ್ಯವಸ್ಥಿತವಾಗಿ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವಂತೆ ಮಾಡಬೇಕಿದೆ.

Leave a Comment