ಆಸ್ತಿ ತೆರಿಗೆ ಪಾವತಿಗೆ ಇಡಿಸಿ ಯಂತ್ರ

 

ಕಲಬುರಗಿ,ಜೂ.18-ಸಾರ್ವಜನಿಕರು ಇನ್ನು ಮುಂದೆ ಆಸ್ತಿ ತೆರಿಗೆ ಪಾವತಿಗಾಗಿ ಮಹಾನಗರ ಪಾಲಿಕೆ ಅಥವಾ ಗುಲಬರ್ಗಾ-1ಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.

ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಗಾಗಿಯೇ ಇಡಿಸಿ ಯಂತ್ರಗಳನ್ನು ಖರೀದಿಸಿದ್ದು, ಪಾಲಿಕೆ ಕರ ವಸೂಲಿಗಾರರು ಆಸ್ತಿ ತೆರಿಗೆದಾರರ ಮನೆ ಮನೆಗೆ ತೆರಳಿ ಆಸ್ತಿ ತೆರಿಗೆ ಪಾವತಿಸಿಕೊಳ್ಳಲಿದ್ದಾರೆ.

ಇಡಿಸಿ ಯಂತ್ರವನ್ನು ಮಹಾನಗರ ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್ ಅವರು ಪಾಲಿಕೆ ಕರ ವಸೂಲಿಗಾರರಿಗೆ ಹಸ್ತಾಂತರಿಸಿದರು.

ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Comment