ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿಲ್ಲ  

ನವದೆಹಲಿ.ಸೆ.೧೩. 317 ಅಕೌಂಟ್ ಗಳು ಎಲ್ಲಿವೆ ಎಂಬುದಕ್ಕೆ ಇಡಿ ಸಾಕ್ಷಿ ಕೊಡಲಿ, ಎಲ್ಲಾ ಖಾತೆಗಳನ್ನು ಡಿಕೆಶಿ ಖಾತೆ ಎಂದು ಹೇಳುತ್ತಿದ್ದಾರೆ. ಇಡಿ ಅಧಿಕಾರಿಗಳ ಆರೋಪ ಶುದ್ಧ ಸುಳ್ಳು. 800 ಕೋಟಿ ಆಸ್ತಿಯನ್ನು ನಾವೇ ಘೋಷಿಸಿಕೊಂಡಿದ್ದೇವೆ. 200 ಕೋಟಿಯನ್ನು ಇಡಿ ಸಾಬೀತುಪಡಿಸಲಿ. ಯಾವ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿಲ್ಲ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಈ ಕುರಿತು ಇಂದು ನ್ಯಾಯಾಲಯ ಸಹೋದರ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆಪ್ಟಂಬರ್ 17ರ ವರಗೆ ಇಡಿ ವಶದಲ್ಲಿ ಇರಿಸಿ ಆದೇಶ ನೀಡಿದ ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್, ರಾಜಕೀಯ ಕಾರಣಗಳನ್ನಿಟ್ಟುಕೊಂಡು ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಇಡಿ ವಿರುದ್ಧ ಕಿಡಿಕಾರಿದರು.

800 ಕೋಟಿ ಆಸ್ತಿಯನ್ನು ನಾವೇ ಸ್ವತಹ ಘೋಷಿಸಿಕೊಂಡಿದ್ದೇವೆ. 200 ಕೋಟಿಯ ಬಗ್ಗೆ ಇಡಿ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ ಅವರು, ನಾವು ಯಾವುದೇ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿಲ್ಲ. ಯಾರದ್ದೋ ಆಸ್ತಿಯನ್ನು ಸಮ್ಮದು ಎಂದು ಹೇಳುವುದಿಲ್ಲ. ಕೊನೆಗೂ ನ್ಯಾಯಕ್ಕೆ ಜಯ ಖಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Leave a Comment