ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಪ್ರಕಟ ರಾಹುಲ್, ಪಾಂಡ್ಯಗೆ ಅವಕಾಶ

ನವದೆಹಲಿ, ಸೆ.೧೦: ಸೆಪ್ಟಂಬರ್ ೧೭ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ.
೧೬ ಸದಸ್ಯರ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ೨೦೧೯ರ ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಬಿಸಿಸಿಐ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ. ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರಿಯಲಿದ್ದು, ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಅಜಿಂಕ್ಯಾ ರಹಾನೆ, ಎಂ ಎಸ್. ಧನಿ, ಹಾರ್ದಿಕ್ ಪಾಂಡ್ಯಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೌಂಟಿ ಆಡಲು ತೆರಳಿರುವ ಆರ್. ಆಶ್ವಿನ್ ಹಾಗೂ ಆಲ್‌ರೌಂಡರ್ ಜಡೇಜಾಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ. ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾ ಹಾಗೂ ಆಶಿಶ್ ನೆಹ್ರಾ ಹೆಸರನ್ನು ಆಯ್ಕೆ ಸಮಿತಿ ಮತ್ತೊಮ್ಮೆ ಕಡೆಗಣಿಸಿದೆ. ಹೀಗಾಗಿ ಇವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಬಹುತೇಕ ಮುಕ್ತಾಯಗೊಂಡಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸರಣಿ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ
ಸೆ.೧೨ ಅಭ್ಯಾಸ ಪಂದ್ಯ ಚೆನ್ನೈ
ಸೆ.೧೭ ಮೊದಲ ಏಕದಿನ ಚೆನ್ನೈ
ಸೆ.೨೧ ಎರಡನೇ ಏಕದಿನ ಕೋಲ್ಕತಾ
ಸೆ.೨೪ ಮೂರನೇ ಏಕದಿನ ಇಂದೋರ್
ಸೆ.೨೮ ನಾಲ್ಕನೇ ಏಕದಿನ ಬೆಂಗಳೂರು
ಅ.೦೧ ಐದನೇ ಏಕದಿನ ನಾಗ್ಪುರ
ಅ.೦೭ ಮೊದಲ ಟಿ೨೦ ರಾಂಚಿ
ಅ.೧೦ ಎರಡನೇ ಟಿ೨೦ ಗುವಾಹಟಿ
ಅ.೧೩ ಮೂರನೇ ಟಿ೨೦ ಹೈದರಾಬಾದ್

Leave a Comment