ಆಸ್ಟ್ರೇಲಿಯಾ ಓಪನ್: ಮೊದಲ ಸುತ್ತಿನಲ್ಲೇ ಸೋತ ಮರಿಯಾ ಶರಪೋವಾ

ಮೆಲ್ಬೋರ್ನ್, ಜ 21 – ಮಾಜಿ ಚಾಂಪಿಯನ್ ಮರಿಯಾ ಶರಪೋವಾ ಅವರು ಆಸ್ಟ್ರೇಲಿಯಾ ಓಪನ್ ಮಹಿಳೆಯರ ಸಿಂಗಲ್ಸ್ ಮೊದಲನೇ ಸುತ್ತಿನಲ್ಲಿಯೇ ವೈಲ್ಡ್ ಕಾರ್ಡ್ ಆಟಗಾರ್ತಿ ಕ್ರೋವೇಷ್ಯಾದ ಡೊನ್ನಾ ವೆಕ್ಚಿಚ್ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

ಮಂಗಳವಾರ ನಡೆದ ಮೊದಲನೇ ಸುತ್ತಿನ ಹಣಾಹಣಿಯಲ್ಲಿ ಶರಪೋವಾ ಅವರು 3-6, 4-6 ಅಂತರದಲ್ಲಿ ನೇರ ಸೆಟ್ ಗಳಿಂದ ವೆಕಿಚ್ ವಿರುದ್ಧ ಸುಲಭವಾಗಿ ಸೋಲು ಒಪ್ಪಿಕೊಂಡರು. ಗೆಲುವಿನೊಂದಿಗೆ ಕ್ರೋವೇಷ್ಯಾ ಆಟಗಾರ್ತಿ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ. ಮುಂದಿನ ಸುತ್ತಿನಲ್ಲಿ ಫ್ರಾನ್ಸ್ ನ ಅಲಿಝ್ ಕಾರ್ನೆಟ್ ವಿರುದ್ಧ ಸೆಣಸಲಿದ್ದಾರೆ.

ಮರಿಯಾ ಶರಪೋವಾ ಅವರು ಮೊದಲನೇ ಸುತ್ತಿನಲ್ಲಿ ಈ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಇವರು 2008ರಲ್ಲಿ ವೈಲ್ಡ್‌ ಕಾರ್ಡ್ ಪಡೆದು ಟೂರ್ನಿಯ ಪ್ರಧಾನ ಸುತ್ತಿಗೆ ಪ್ರವೇಶ ಮಾಡಿದ್ದರು. ಅದೇ ವರ್ಷ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ವೆಕಿಚ್, ” ಇಂದಿನ ಗೆಲುವು ಅತ್ಯಂತ ಹೆಚ್ಚು ಸಂತಸ ತಂದಿದೆ. ದೊಡ್ಡ ವೇದಕೆಗಳಲ್ಲಿ ಆಡುವುದನ್ನೂ ನಿಜಕ್ಕೂ ಆಹ್ಲಾದಿಸುತ್ತೇನೆ. ಇದು ಕೂಡ ಅತಿ ದೊಡ್ಡ ಟೂರ್ನಿ. ನನ್ನ ಅವಧಿಯಲ್ಲಿ ಖುಷಿಯಾಗಿ ಆಡಿದ್ದೇನೆ,” ಎಂದು ಸಂತಸ ವ್ಯಕ್ತಪಡಿಸಿದರು.

Leave a Comment