ಆಸ್ಕರ್ ಪ್ರಶಸ್ತಿ ವಿಜೇತ ಪ್ಯಾರಸೈಟ್ ವಿರುದ್ಧ ತಮಿಳು ಚಿತ್ರ ನಿರ್ಮಾಪಕ ದೂರು

ಚೆನ್ನೈ, ಫೆ. 15- ಪ್ರಸಕ್ತ ಸಾಲಿನ ಆಸ್ಕರ್‌ನಲ್ಲಿ 4 ಪ್ರಶಸ್ತಿ ಪಡೆದುಕೊಂಡ ದಕ್ಷಿಣ ಕೊರಿಯಾದ ಪ್ಯಾರಸೈಟ್ ಚಿತ್ರದ ವಿರುದ್ಧ ತಮಿಳು ಚಿತ್ರ ನಿರ್ಮಾಪಕ ತೇನಪ್ಪ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದಾರೆ.
ತಮಿಳು ಚಿತ್ರ ಹಾಗೂ ನಾಯಕ ನಟ ವಿಜಯ್ ಅಭಿನಯದ 1999ರಲ್ಲಿ ಬಿಡುಗಡೆಯಾಗಿದ್ದ `ಮಿನ್ ಸಾರ ಕಣ್ಣಾ’ ಚಿತ್ರದ ಕಥಾವಸ್ತುವನ್ನು ಪ್ಯಾರಸೈಟ್ ಚಿತ್ರ ಒಳಗೊಂಡಿದ್ದು, ಇದರ ವಿರುದ್ಧ ಪ್ರಕರಣ ದಾಖಲಿಸಲಿದ್ದೇನೆ ಎಂದು ನಿರ್ಮಾಪಕ ತೇನಪ್ಪನ್ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ನ್ಯಾಯವಾದಿಗಳ ನೆರವು ಪಡೆದು ಪ್ರಕರಣ ದಾಖಲಿಸಲಾಗುವುದು. ಪ್ಯಾರಸೈಟ್ ಸಿನಿಮಾ ಕಥಾವಸ್ತು ಮಿನ್ ಸಾರ ಕಣ್ಣ ಸಿನಿಮಾದ್ದು ಎಂದು ತಿಳಿಸಿರುವ ತೇನಪ್ಪನ್ ಅವರು, ಮಿನ್‌ಸಾರ ಕಣ್ಣಾ ಕಥಾವಸ್ತು ಪುರುಷ ವಿರೋಧಿ ಮಹಿಳಾ ಉದ್ಯಮಿ ಇಂದಿರಾದೇವಿ ಎನ್ನುವರು ತಮ್ಮ ಸುತ್ತಲು ಮಹಿಳಾ ಸಿಬ್ಬಂದಿ ನೇಮಕ ಮಾಡಿಕೊಂಡಿರುತ್ತಾರೆ.
ಆಕೆಯ ಪುರುಷ ವಿರೋಧಿ ಧೋರಣೆ ಹಿಂದೆ ಪ್ರೇಮ ವೈಫಲ್ಯ ಅಡಗಿರುತ್ತದೆ. ಎಲ್ಲ ಕಲ್ಪನೆಗಳನ್ನು ಮೀರಿ ಪುರುಷನ ವಿರುದ್ದ ಆಕೆ ಮನಃಸ್ಥಿತಿ ಇರುತ್ತದೆ.
ನಂತರ ನಾಯಕ ಮನವೊಲಿಸಿ ಆಕೆಯ ಸೋದರಿಯನ್ನೇ ವಿವಾಹವಾಗುವುದು ಚಿತ್ರದ ಕಥಾಹಂದರ ಎಂದು ತಿಳಿಸಿದ್ದಾರೆ.

Leave a Comment