ಆಸೀಸ್‌ಗೆ ಭಾರತ ತಿರುಗೇಟು ಬೌಲರ್‌ಗಳ ಪಾರಮ್ಯ

ಅಡಿಲೇಡ್, ಡಿ ೭- ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿ ಎದುರಿಸಲು ತಿಣುಕಾಡಿದ ಕಾಂಗರೂ ಪಡೆ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ೧೯೧ ರನ್‌ಗೆ ೭ ವಿಕೆಟ್ ಕಳೆದುಕೊಂಡು, ೫೯ ರನ್‌ಗಳ ಹಿನ್ನಡೆ ಅನುಭವಿಸಿದೆ. ಈ ಮೂಲಕ ಭಾರತ ಆಸೀಸ್ ತಂಡಕ್ಕೆ ತಿರುಗೇಟು ನೀಡಿದೆ.

ಕಾಂಗರೂ ಪಡೆಗಳ ಮೇಲೆ ಭಾರತೀಯ ಬೌಲರ್‌ಗಳು ಸವಾರಿ ನಡೆಸಿದರು, ಕರಾರುವಕ್ಕಾದ ಬೌಲಿಂಗ್ ದಾಳಿಯನ್ನು ಎದುರಿಸಲು ಆಸೀಸ್ ಬ್ಯಾಟ್ಸ್ ಮ್ಯಾನ್‌ಗಳು ತಿಣುಕಾಡಿದರು. ಟೀಂ ಇಂಡಿಯಾ ಚಹಾ ವಿರಾಮದ ವೇಳೆ ಆಸೀಸ್‌ನ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿತ್ತು. ಇದಕ್ಕೂ ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಅಲೌಟ್ ಆಗಿ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಆ ಬಳಿಕ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ತಂಡ ಚಹಾ ವಿರಾಮದ ವೇಳೆ ೧೧೭ ಅಲ್ಪ ಮೊತ್ತ ಕಲೆಹಾಕಿತ್ತು.

ನಿನ್ನೆ ನಡೆದ ಮೊದಲ ದಿನದಾಟದ ಅಂತ್ಯಕ್ಕೆ ೨೫೦ ರನ್‌ಗೆ ೯ ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಒಂದೂ ರನ್ ಕಲೆಹಾಕದೆ ಆಲೌಟ್ ಆಯಿತು. ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ಆಸ್ಟ್ರೇಲಿಯಾ ಮೊದಲ ಓವರ್‌ನಲ್ಲೇ ಆರೋನ್ ಫಿಂಚ್ ವಿಕೆಟ್ ಕಳೆದುಕೊಂಡಿತು. ಇಶಾಂತ್ ಶರ್ಮಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಖಾತೆ ತೆರೆಯದೆ ಫಿಂಚ್ ಪೆವಿಲಿಯನ್ ಸೇರಿಕೊಂಡರು. ಬಳಿಕ ಮರ್ಕಸ್ ಹ್ಯಾರಿಸ್(೨೬), ಉಸ್ಮನ್ ಖ್ವಾಜಾ(೨೮) ಹಾಗೂ ಶಾನ್ ಮಾರ್ಷ್(೨) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದರು.

ಇತ್ತ ಉತ್ತಮವಾಗಿಯೆ ರನ್ ಕಲೆಹಾಕುತ್ತಿದ್ದ ಪೀಟರ್ ಹ್ಯಾಂಡ್ಸ್ಕಾಮ್ಬ್ ಅವರು ಬುಮ್ರಾ ಎಸೆತದಲ್ಲಿ ೩೪ ರನ್‌ಗೆ ಬಲಿಯಾದರೆ, ಬಂದ ಬೆನ್ನಲ್ಲೆ ನಾಯಕ ಟಿಮ್ ಪೈನ್ ಕೇವಲ ೫ ರನ್‌ಗೆ ಜೌಟಾದರು ಇನ್ನು ಪ್ಯಾಟ್ ಕಮಿನ್ಸ್ ಕೂಡ ೧೦ ರನ್‌ಗೆ ನಿರ್ಗಮಿಸಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಆಸೀಸ್ ಆಟಗಾರರು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ೨೦೦ ರನ್‌ಗೂ ಮುನ್ನವೆ ತನ್ನ ೭ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಸದ್ಯ ೭ ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ ಆಲೌಟ್ ಭೀತಿಯಲ್ಲಿದೆ. ಭಾರತ ಪರ ಆರ್. ಅಶ್ವಿನ್ ೩ ವಿಕೆಟ್ ಕಿತ್ತಿದ್ದರೆ, ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ೨ ವಿಕೆಟ್ ಪಡೆದಿದ್ದಾರೆ.

ಕೆಎಲ್ ರಾಹುಲ್ ಕೈ ಬಿಡುವುದು ಸೂಕ್ತ
ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಪರ ರಾಹುಲ್ ಕೇವಲ ೨ ರನ್ ಗಳಿಸಿ ಕಳಪೆ ಮಟ್ಟದಲ್ಲಿ ಪೆವಿಲಿಯನ್ ಹಾದಿ ಹಿಡಿದಿದ್ದರು.

ಎಷ್ಟೆ ಅವಕಾಶ ನೀಡಿದರು ಮತ್ತದೆ ಕಳಪೆ ಆಟ ಪ್ರದರ್ಶಿಸುತ್ತಿರುವ ಕೆ. ಎಲ್ ರಾಹುಲ್ ೨ನೇ ಇನ್ನಿಂಗ್ಸ್‌ನಲ್ಲೂ ಆಡದೆ ಹೋದರೆ ತಂಡದಿಂದ ಕೈ ಬಿಡುವುದು ಉತ್ತಮ ನಿರ್ಧಾರ ಎಂದು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಇತ್ತೀಚೆಗಷ್ಟೆ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಅವರು ಕೂಡ ರಾಹುಲ್ ಕಳಪೆ ಫಾರ್ಮ್ ಬಗ್ಗೆ ಮಾತನಾಡಿದ್ದರು. ರಾಹುಲ್ ಔಟ್ ಆಗಲು ಹೊಸಹೊಸ ದಾರಿಯನ್ನು ಹುಡುಕುತ್ತಿರುತ್ತಾರೆ ಎಂದಿದ್ದರೆ.

 

Leave a Comment