ಆಸಿಸ್‌ಗೆ ವರದಾನವಾದ ಮಂದ ಬೆಳಕು

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದ ಕುಲ್‌ದೀಪ್ ಅವರನ್ನು ತಂಡದ ಸಹ ಆಟಗಾರರು ಅಭಿನಂದಿಸುತ್ತಿರುವುದು.

ಸಿಡ್ನಿ, ಜ. ೬- ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ದವಡೆಗೆ ಸಿಲುಕಿರುವ ಆಸಿಸ್‌ಗೆ ಮಂದ ಬೆಳಕು ವರದಾನವಾಗಿ ಪರಿಣಮಿಸಿದೆ. ಒಂದು ದಿನದ ಆಟ ಮಾತ್ರ ಬಾಕಿ ಉಳಿದಿದ್ದು, ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ನಿನ್ನೆ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಇಂದು 4ನೇ ದಿನದ ಆಟ ಮುಂದುವರೆಸಿತ್ತು. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ 300 ರನ್‌ಗಳಿಗೆ ಸರ್ವಪತನ ಕಂಡಿತು.

ಬ್ಯಾಂಕ್ ಕಮಿಂಗ್ಸ್ 25, ನಾತನ್ ಲಯನ್ 0, ಜೋಶ್ ಹೇಜಲ್ ಹುಡ್ 21 ರನ್ ಗಳಿಸಿದರೆ, ಮೈಕಲ್ ಸ್ಟಾರ್ಕ್ ಅಜಯ 29 ರನ್ ಗಳಿಸಿದರು. ಭಾರತದ ಪರ ಕುಲ್‌ದೀಪ್ 5 ವಿಕೆಟ್ ಪಡೆದು, ಯಶಸ್ವಿ ಬೌಲರ್ ಎನಿಸಿದರೆ, ಮೊಹ್ಮದ್ ಶೆಮಿ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಜಸ್ಟ್‌ಪ್ರೀತ್ ಬುಂಬ್ರ 1 ವಿಕೆಟ್ ಗಳಿಸಿದರು.

3ನೇ ಟೆಸ್ಟ್ ಪಂದ್ಯದಲ್ಲಿ ಕೊಹಿಲಿ ಪಡೆ ಆಸ್ಟ್ರೇಲಿಯಾಕ್ಕೆ ಫಾಲೋಆನ್ ನೀಡಿರಲಿಲ್ಲ. ಆದರೆ, ಅಂತಿಮ ಪಂದ್ಯದಲ್ಲಿ ಆಸಿಸ್ ತಂಡಕ್ಕೆ ಫಾಲೋಆನ್ ನೀಡಿದೆ. 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಫಾಲೋ ಆನ್ ಎದುರಿಸುತ್ತಿದೆ.

2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ. ಈ ಮೂಲಕ ಆಸಿಸ್ 316 ರನ್‌ಗಳ ಹಿನ್ನೆಡೆ ಅನುಭವಿಸಿದ್ದು, ಸೋಲಿನ ಸುಳಿಗೆ ಸಿಲುಕಿದೆ.

ಇನ್ನು 1 ದಿನದ ಆಟ ಬಾಕಿವುಳಿದಿದ್ದು, ಮಂದಬೆಳಕು ತಂಡಕ್ಕೆ ಆಸರೆಯಾಗುವುದೇ? ಅಥವಾ ಆಸಿಸ್ ಬ್ಯಾಟ್ಸ್‌ಮನ್‌ಗಳು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment