ಆಸಿಯಾನ್ ಶೃಂಗಸಭೆ ಬ್ಯಾಂಕಾಕ್‌ನಲ್ಲಿ ಆರಂಭ

ಮಾಸ್ಕೋ, ಜೂ 20-34ನೇ ಆಗ್ನೇಯ ಏಷ್ಯಾ ರಾಷ್ಟ್ರಗಳ (ಆಸಿಯಾನ್) ಶೃಂಗಸಭೆ ಇಂದು ಥೈಲ್ಯಾಂಡ್‌ನ  ಬ್ಯಾಂಕಾಕ್ ನಲ್ಲಿ ಗುರುವಾರದಿಂದ  ಪ್ರಾರಂಭವಾಗಿ, ಭಾನುವಾರದವರೆಗೆ ನಡೆಯಲಿದೆ.

ಈ ವರ್ಷದ ಧ್ಯೇಯವಾಕ್ಯ “ಸುಸ್ಥಿರತೆಗಾಗಿ ಸಹಭಾಗಿತ್ವ ಮುಂದುವರಿಸುವುದು” ಮತ್ತು ಆಸಿಯಾನ್ ಸದಸ್ಯ ರಾಷ್ಟ್ರಗಳಲ್ಲಿ ವಿಶೇಷವಾಗಿ ಸುಸ್ಥಿರತೆಯ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಮತ  ಉತ್ತೇಜಿಸಲುವಿಶೇಷ ಗಮನ ಹರಿಸುವುದೇ ಆಗಿದೆ.

ಶೃಂಗಸಭೆಯ ಅಧ್ಯಕ್ಷತೆಯನ್ನು ಥೈಲ್ಯಾಂಡ್ ಪ್ರಧಾನಿ ಪ್ರಯೂತ್ ಚಾನ್-ಒ-ಚಾ ವಹಿಸಲಿದ್ದು, ಮ್ಯಾನ್ಮಾರ್ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಮತ್ತು ಮಲೇಷಿಯಾದ ಪ್ರಧಾನಿ ಮಹತೀರ್ ಮೊಹಮದ್ ಸೇರಿದಂತೆ 10 ಆಸಿಯಾನ್ ಸದಸ್ಯ ರಾಷ್ಟ್ರಗಳ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಚಿಂತನ- ಮಂಥನ ನಡೆಸಲಿದ್ದಾರೆ.

Leave a Comment