ಆಶೀರ್ವಾದ ಫೌಂಡೇಶನ ವಿದ್ಯಾರ್ಥಿಗಳ ಪುರಸ್ಕಾರ

ರಾಯಚೂರು.ಜೂ.16- ವಿದ್ಯಾಭ್ಯಾಸ ಕೇವಲ ಫಲಿತಾಂಶ ಸೀಮಿತವಾಗದೇ ಜ್ಞಾನರ್ಜನೆಗಾಗಿ ಮಾಡುವಂತಾಗಬೇಕು ಎಂದು
ಮಾಜಿ ಎಂ.ಎಲ್.ಸಿ. ಎನ್.ಶಂಕರಪ್ಪ ಹೇಳಿದರು.
ಜಿಲ್ಲಾ ವೀರಶೈವ ಕಲ್ಯಾಣ ಮಂಟಪ್ಪದಲ್ಲಿ ಹಮ್ಮಿಕೊಂಡಿದ್ದ ಆಶೀರ್ವಾದ ಫೌಂಡೇಶನ್‌ವತಿಯಿಂದ ನಾಲ್ಕನೇ ವರ್ಷದ ಜಿಲ್ಲಾ ಮಟ್ಟದ ಪ್ರತೀಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಕಾರ್ಯಕ್ರಮವು ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಶೇಕಡ 90 ಕ್ಕು ಅಧಿಕ ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತೀಭಾ ಪುರಸ್ಕಾರವನ್ನು ಮಾಡಿಕೊಂಡು ಬಂದಿದ್ದಾರೆ.
ವಿದ್ಯಕ್ಕೆ ಇರುವ ಗೌರವ ಜಗತ್ತಿನ ಯಾವುದೇ ವಸ್ತು, ವ್ಯಕ್ತಿ ಸರಿ-ಸಮ ಇಲ್ಲ. ವಿದ್ಯಕ್ಕೆ ರಾಜ್ಯ, ಮಂತ್ರಿ ಎಂದು ಹೋಲಿಸಲು ಆಗುವುದಿಲ್ಲ. ಜ್ಞಾನವನ್ನು ಪಡೆದ ವಿದ್ಯಾರ್ಥಿಗಳು ತಮ್ಮದೆ ಆದ ಒಂದೊಂದು ಕ್ಷೇತ್ರದಲ್ಲಿ ಸಾಧನೆಯನ್ನು ನೋಡಬಹುದು. ವಿದ್ಯಾಭ್ಯಾಸ ಕೇವಲ ಫಲಿತಾಂಶಕ್ಕೆ ಸೀಮಿತವಾಗದೆ ಜ್ಞಾನಾರ್ಜನೆಗೆ ಮಾಡುವಂತಾಗಬೇಕು.
ಆಶೀರ್ವಾದ ಫೌಂಡೇಶನ್ ಅವರು ನಮ್ಮ ದೇಶದ ಪ್ರಸಿದ್ದ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಭಾವಚಿತ್ರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ.
ಕಲಂ ಅವರ ಸಾಧನೆ ಅಪಾರವಾದ್ದುದು ಅವರು ವಿಜ್ಞಾನಿ ಆಗಬೇಕಾದರೆ ಬಹಳಷ್ಟು ಬಡತನದಿಂದ ಬಂದಿದ್ದಾರೆ. ಅವರು ಭಾರತಕ್ಕೆ ಒಂದು ಮಿಸೈಲ್ ಇದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕರು ಎಸ್.ಆರ್.ಮನಹಳ್ಳಿ ಧಾರವಾಡ, ಭಾರತೀಯ ಸೇನೆಯ ಕರ್ನಲ್ ಎನಮ್.ಹೆಚ್. ಮಹೇಶ್ವರ, ಡಾ.ಎಂ.ಕೆ ನಸೀರ್, ಆಶೀರ್ವಾದ ಫೌಂಡೇಶನ್ ಅಧ್ಯಕ್ಷರು ಡಾ.ಬಸನಗೌಡ ಟಿ.ಪಾಟೀಲ್, ಅಂತರಾಷ್ಟ್ರೀಯ ಕರಾಟೆ ಪಟು ಮಲ್ಲಮ ಮಲ್ಲಟ, ಪಕ್ಷಿ ಪ್ರೇಮಿ ಸಲ್ಲಾವುದ್ದೀನ್, ಚಿನ್ನದ ಪದಕ ವಿಜೇತರಾದ ಶೌರತ್ ಇನ್ನಿಸಾ ಬೇಗಂ ಇನ್ನಿತರರು ಉಪಸ್ಥಿತರಿದ್ದರು.

Leave a Comment