ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ  ಎಂಎಲ್‍ಸಿ ಕೊಡಯ್ಯ ಖಂಡನೆ

ಬಳ್ಳಾರಿ, ಏ.3; ಮನೆಗಳ ಸಮೀಕ್ಷೆಗೆ ಹೋಗಿದ್ದ ಅಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಮೇಲೆ ಬೆಮಗಳೂರಿನಲ್ಲಿ ಕಲ್ಲು ತೂರಾಟ ನಡೆಸಿ, ಅವರಿಗೆ ಬೆದರಿಕೆ ಹಾಕಿದ ಘಟನೆಯನ್ನು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಲ್ಲೆ ನಡೆಸಿದವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ಒತ್ತಾಯಿಸಿರುವೆ. ಇಲ್ಲದಿದ್ದರೆ ಇಂತಹ ಪ್ರಕರಣಗಳು ರಾಜ್ಯಾದ್ಯಂತ ಸಂಭವಿಸುತ್ತವೆ ಎಂದಿದ್ದಾರೆ.
ಪೊಲೀಸರು, ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸ್ಟಾಫ್ ನಮಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರೋನಾ ವೈರಸ್ ಹಾವಳಿ ನಿಯಂತ್ರಣಕ್ಕೆ ಹಗಲಿರುಳೂ ಯುದ್ಧದೋಪಾದಿಯಲ್ಲಿ ಶ್ರಮಿಸುತ್ತಿದ್ದಾರೆ. ಇದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೂ ಅವರಿಗೆ ಎಲ್ಲಾ ತರಹದ ಬೆಂಬಲ ನೀಡಬೇಕು ಎಂದಿರುವ ಅವರು.
ಸಾಮಾಜಿಕ ಲಾಕ್ ಡೌನ್‍ಇತ್ಯಾದಿ ಮುಂಜಾಗೃತಾ ಕ್ರಮಗಳಿಂದಾಗಿ ಕರೋನಾ ಹತೋಟಿಯಲ್ಲಿದೆ ಎಂದು ಹೇಳಬಹುದು. ಅನಾವಶ್ಯಕವಾಗಿ ಬೀದಿಗಿಳಿಯಬಾರದೆಂದು, ಜಿಲ್ಲಾಡಳಿತ ಸೂಚಿಸುವ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.

ಎಲ್ಲಾ ಮಠಾಧೀಶರಿಗೆ, ಮೌಲ್ವಿ-ಮುತಾವಲಿ, ಬಿಷಪ್-ಪಾದ್ರಿಗಳಿಗೆ ಹಾಗೂ ಮುಖಂಡರಿಗೆ ನನ್ನದೊಂದು ಮನವಿ. ತಮ್ಮ ತಮ್ಮ ಜನಾಂಗಗಳ ಭಕ್ತರಿಗೆ ಸ್ವಯಂ ಆಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಮನವಿ ಮಾಡಬೇಕು. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ತಿಂತಿರುಗಿರುವ ಎಲ್ಲರು ಸ್ವಯಂ ಆಗಿ ತಮ್ಮ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿದ್ದಾರಲ್ಲದೆ. ಮುಂಬರುವ ದಿನಗಳಲ್ಲಿ ನಾವು ಕಡ್ಡಾಯವಾಗಿ ಸ್ವಯಂ ಗೃಹ ಬಂಧನ ಪಾಲಿಸಿದಲ್ಲಿ ಭೀಭತ್ಸ ಕರೊನಾವನ್ನು ಓಡಿಸುವಲ್ಲಿ ಸಫಲರಾಗುತ್ತೇವೆ. ಆದ್ದರಿಂದ ಎಲ್ಲರೂ ಮನೆಯಲ್ಲಿರಿ-ಸುರಕ್ಷಿತವಾಗಿರಿ. ಮುಂಬರುವ ದಿನಗಳನ್ನು ಸವಾಲಾಗಿ ಸ್ವೀಕರಿಸೋಣ. ಭಾರತ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಮಾದರಿಯಾಗೋಣ ಎಂದಿದ್ದಾರೆ.

Leave a Comment