ಆಶಾ ಕಾರ್ಯಕರ್ತರಿಗೆ ಆಹಾರಧಾನ್ಯದ ಕಿಟ್

ಬಳ್ಳಾರಿ:ಮೇ.23- ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇಂದು ಆಶಾ ಕಾರ್ಯಕರ್ತರಿಗೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಆಹಾರಧಾನ್ಯದ ಕಿಟ್ ವಿತರರಿಸಿದರು.

ನಂತರ ಅವರು ಮಾತನಾಡಿ, ಕೊರೋನಾ ನಿಯಂತ್ರಣ ಕಾರ್ಯಕ್ರಮದಲ್ಲಿ ಇಡೀ ದೇಶದಲ್ಲಿ ಆಶಾ ಕಾರ್ಯಕರ್ತರ. ಸೇವೆ ಶ್ಲಾಘನೀಯವಾದುದು. ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಬರುವ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡಿ ಜನರ ಆರೋಗ್ಯ ಪರಿಸ್ಥತಿ ಬಗ್ಗೆ ವರದಿ‌ ನೀಡಿದ್ದಾರೆ. ಅವರ ಸೇವೆ ಅನುಪಮವಾದುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಬಸಾರೆಡ್ಡಿ, ಡಿಹೆಚ್ ಓ ಜನಾರ್ಧನ್, ಬಿಜೆಪಿ ಮುಖಂಡರುಗಳಾದ ಗುರುಲಿಂಗನಗೌಡ, ರಾಬಕೋ ಹಾಲು ಒಕ್ಕೂಟದ ನಿರ್ದೇಶಕರ ಜಿ ವೀರಶೇಖರ್ ರೆಡ್ಡಿ, ಪಾಲಿಕೆ ಮಾಜಿ ಸದಸ್ಯ ಮೋತ್ಕರ್ ಶ್ರೀನಿವಾಸ್ ರೆಡ್ಡಿ ಮತ್ತಿತ ರರು ಇದ್ದರು

Leave a Comment