ಆಶಾಯೋಜನೆ:17 ರಂದು ದೆಹಲಿಯಲ್ಲಿ ಸಭೆ

ಕಲಬುರಗಿ ಸ 14: ರೈತ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಇದ್ದಾಗ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯನ್ನು ರೈತರಿಗೆ ಒದಗಿಸುವ ಉದ್ದೇಶದಿಂದ ಜಾರಿಗೆ ತಂದ ಪ್ರಧಾನ ಮಂತ್ರಿಗಳ ಆಶಾ ಯೋಜನೆಯ ಬಗ್ಗೆ ರಾಜ್ಯದ ರೈತರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ರೈತ ಮೋರ್ಚಾ ಮುಂದಾಗಿದೆ ಎಂದು ಮೋರ್ಚಾದ ರಾಜ್ಯ ಉಪಾಧ್ಯಕ್ಷ  ಬಸವ

ರಾಜ ಇಂಗಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯೋಜನೆಯ ಬಗ್ಗೆ ಚರ್ಚಿಸಲು  17 ರಂದು ದೆಹಲಿಯಲ್ಲಿ  ಬಿಜೆಪಿ ರಾಷ್ಟ್ರೀಯಕಿಸಾನ ಮೋರ್ಚಾ ಸಭೆ ಕರೆದಿದ್ದು, ಸಭೆಯಲ್ಲಿ ಕೇಂದ್ರದ ಕೃಷಿ ಸಚಿವರು ಪಾಲ್ಗೊಳ್ಳುವರು ಎಂದರು

ನೂತನ ಯೋಜನೆಯಡಿ  ಮಾರುಕಟ್ಟೆ ಭರವಸೆ ಯೋಜನೆ,ಧಾರಣೆ ಕೊರತೆ ಪಾವತಿ ಯೋಜನೆ, ಖಾಸಗಿ

ಸಂಗ್ರಹಣೆ ಮತ್ತು ದಾಸ್ತಾನು ಯೋಜನೆಗಳನ್ನು ತಂದಿದ್ದು ದೇಶದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು

ಬೆಂಬಲಬೆಲೆಯಲ್ಲಿಹೆಸರು ಉದ್ದು ಖರೀದಿಗೆ ರಾಜ್ಯ ಸರ್ಕಾರ ಮೀನ ಮೇಷ ಎಣಿಸುತ್ತಿದ್ದು, ಖರೀದಿ ಕೇಂದ್ರ ಇನ್ನೂ ಆರಂಭವಾಗಿಲ್ಲ. ಆಗಸ್ಟ್ 1 ರಿಂದ ಇಲ್ಲಿಯವರೆಗೆ ನಗರದ ಎಪಿಎಂಸಿಯಲ್ಲಿ 65 ಸಾವಿರ ಕ್ವಿಂಟಾಲ್ ಹೆಸರು 15 ಸಾವಿರ ಕ್ವಿಂಟಾಲ್‍ಉದ್ದು ಖರೀದಿ ಆಗಿದೆ ಎಂದರು…

Leave a Comment