ಆಳ್ವಾಸ್ ಕಾಲೇಜಿಗೆ ನ್ಯಾಕ್ ಎ ಗ್ರೇಡ್ ಮಾನ್ಯತೆ

ಮಂಗಳೂರು, ಜೂ.೧೫-  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವಆಳ್ವಾಸ್ ಕಾಲೇಜಿಗೆಯುಜಿಸಿ ನ್ಯಾಕ್‌ಸಂಸ್ಥೆಯುಎ ಗ್ರೇಡ್‌ಮಾನ್ಯತೆ ನೀಡಿದ್ದು, ಹೊಸ ಮಾನ್ಯತಾಕ್ರಮದಲ್ಲಿಸಿಜಿಪಿಎ ೩.೨೩ಪಡೆದಿರುವುದು ವಿಶೇಷವಾಗಿದೆ. ಈ ಮಾನ್ಯತೆ ಮುಂದಿನ ೫ ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.

ಎ ಗ್ರೇಡ್ ಮಾನ್ಯತೆಯಿಂದ ಸಂಶೋಧನಾ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗಲಿದ್ದು, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆಅಂತರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ.ಜೊತೆಯಲ್ಲಿ ವಿಶ್ವದ ಪ್ರಮುಖ ಸಂಸ್ಥೆಗಳೊಂದಿಗೆ ಶೈಕ್ಷಣಿಕ-ಔದ್ಯಮಿಕ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ರಹದಾರಿಯಾಗಲಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿಉದ್ಯಮ ವಲಯಕ್ಕೆಅವಶ್ಯಕವಾದ ವೃತ್ತಿಪರತರಬೇತಿ ಪಡೆದು, ಜಾಗತಿಕ ಸ್ಥರದಉದ್ಯೋಗ ಪಡೆಯಲು ವೇದಿಕೆಯನ್ನು ನಿರ್ಮಿಸಿದಂತಾಗುತ್ತದೆ.

ಪಠ್ಯಕ್ರಮ, ಶೈಕ್ಷಣಿಕಕಾರ್ಯಚಟುವಟಿಕೆ, ಸಂಶೋಧನೆ, ವಿಸ್ತರಣಾ ಕಾರ್ಯಕ್ರಮಗಳು, ಮೂಲಭೂತ ಸೌಕರ್ಯಗಳು, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಸರ್ವತೋಮುಖಅಭಿವೃದ್ಧಿ, ಆಡಳಿತ, ನಾಯಕತ್ವ, ನಿರ್ವಹಣೆ ಹಾಗೂ ವ್ಯಕ್ತಿಗತ ಮೌಲ್ಯಗಳು ಮತ್ತುಅತ್ಯುತ್ತಮ ಕೆಲಸಗಳನ್ನು ಮೌಲ್ಯಮಾಪನ ಮಾಡಿ ಮಾನ್ಯತೆಯನ್ನುಎರಡನೆಯಅವಧಿಗೆ ನೀಡಲಾಗಿದೆ.ನ್ಯಾಕ್‌ತಂಡ ಮೌಲ್ಯಮಾಪನಕ್ಕಾಗಿ ಮೇ ೨೧ ಮತ್ತು ೨೨ರಂದು ಆಳ್ವಾಸ್ ಕಾಲೇಜಿಗೆ ಭೇಟಿ ನೀಡಿತ್ತು.

Leave a Comment