ಆಲ್ಕೋಹಾಲ್ ರಹಿತ ಸ್ಯಾನಿಟೈಸರ್ ಬಿಡುಗಡೆ

ಬೆಂಗಳೂರು, ಏ. ೨- ಕೋವಿಡ್‌-19 ಸೇರಿದಂತೆ ಯಾವುದೇ ಸೋಂಕು ತಗುಲದಂತೆ ಅನುಕೂಲವಾಗುವ ಆಲ್ಕೋಹಾಲ್ ರಹಿತ ಸ್ಯಾನಿಟೈಸರ್ ಮಾರುಕಟ್ಟೆಗೆ ಬಂದಿದೆ.
ಶುಚಿತ್ವ ಕಾಪಾಡಿಕೊಳ್ಳಲು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‌ಗಳು ಮಾತ್ರವಲ್ಲ, ಆಲ್ಕೋಹಾಲ್ ರಹಿತವಾಗಿರುವ ಜೈವಿಕ ಸ್ಯಾನಿಟೈಸರ್ ಮಾರುಕಟ್ಟೆಗೆ ಬಂದಿದೆ.
ನಗರದ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈ. ಕಂಪೆನಿ ತಯಾರಿಸಿರುವ ಈ ಸ್ಯಾನಿಟೈಸರ್‌ನ್ನು ಬಳಸಿದಾಗ ಆಲ್ಕೋಹಾಲ್ ಅಂಶವನ್ನು ಒಳಗೊಂಡ ಇತರೆ ಎಲ್ಲ ಪಾರಂಪರಿಕ ಸ್ಯಾನಿಟೈಸರ್‌ಗಳು ಹೆಚ್ಚು ಕಾಲ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಸ್ಯಾನಿಟೈಸರ್‌ನ 100 M.L. ಬಾಟಲ್‌ನ ಬೆಲೆ ಕೇವಲ 50 ರೂ.ಗಳು ಮಾತ್ರ.
ಕೊರೊನಾ ವೈರಾಣು ಹಬ್ಬುತ್ತಿರುವ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಈ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಜೈವಿಕ ಸ್ಯಾನಿಟೈಸರ್ ಪೂರೈಸಬೇಕು ಎಂಬ ಉದ್ದೇಶದಿಂದ ಈ ಹೊಸ ಆವಿಷ್ಕಾರ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಈ ಕಂಪನಿ ವತಿಯಿಂದ ಪ್ರಧಾನಿ ಕೇಱ್ಸ್‌ಗೆ 10 ಲಕ್ಷ ರೂ. ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಲಾಯಿತು.

Leave a Comment