ಆರ್.ಎಸ್.ಎಸ್. ಸಂವಿಧಾನ ಜಾರಿ ಯತ್ನ: ಆರೋಪ

ಕಲಬುರಗಿ ಆ 25: ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಪಕ್ಷದ ಅಂಗಸಂಸ್ಥೆ ಆರ್‍ಎಸ್ ಎಸ್ ಸಿದ್ಧಪಡಿಸಿದ ಮನುಸ್ಮøತಿ ಆಧಾರಿತ ಸಂವಿಧಾನವನ್ನು ಜಾರಿಗೆ ತರುವ ಯತ್ನ ನಡೆಸುತ್ತಿದೆ ಎಂದು ಡಾ ಬಿ ಆರ್ ಅಂಬೇಡ್ಕರ್ ಅವರ ಮರಿಮೊಮ್ಮಗ ರಾಜರತನ ಅಂಬೇಡ್ಕರ್ ಗಂಭೀರ ಆರೋಪ ಮಾಡಿದರು.

ದೆಹಲಿಯಲ್ಲಿ ಸಂವಿಧಾನ ಪ್ರತಿ ಸುಟ್ಟ ಘಟನೆ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ಇಂದು ಹಮ್ಮಿಕೊಂಡ ರ್ಯಾಲಿಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಸಂವಿಧಾನ ಹಾಗೂ ಮೀಸಲಾತಿ ವಿರೋಧಿ ಭಾವನೆ ಬೆಳೆಯುತ್ತಿದೆ.ದೆಹಲಿಯಲ್ಲಿಯೇ ಸಂವಿಧಾನ ಪ್ರತಿ ಸುಟ್ಟ ಘಟನೆ ನಡೆದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವಹಿಸಿರುವದೇಕೆ ?ಎಂದು ಪ್ರಶ್ನಿಸಿದರು.

ಆರ್ಥಿಕ  ಮೀಸಲಾತಿ ಜಾರಿಗೆ ತರುವಂತೆ  ಆರ್‍ಎಸ್‍ಎಸ್ ಪ್ರಮುಖ ಮೋಹನ ಭಾಗವತ್ ಪ್ರತಿಪಾದಿಸಿದ್ದಾರೆ.ಆದರೆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ತಾರತಮ್ಯಕ್ಕೆ ಕಾರಣವಾಗುತ್ತಿಲ.್ಲ ಬದಲಿಗೆ ಜಾತಿಯು ತಾರತಮ್ಯಕ್ಕೆ ಕಾರಣವಾಗುತ್ತಿದೆ.ಜಾತಿರಹಿತ ಸಮಾಜ ನಿರ್ಮಿಸಿದ ನಂತರ  ಜಾತಿ ಮೀಸಲಾತಿ ತೆಗೆದು ಹಾಕಬೇಕು ಎಂದರು

ಒಂದು ದೇಶ ಒಂದು ಶಿಕ್ಷಣ

ಒಂದು ದೇಶ ಒಂದು ಚುನಾವಣೆ ಈ ದೇಶದಲ್ಲಿ ಅವಶ್ಯವಿಲ್ಲ. ಆದರೆ ಒಂದು ದೇಶ ಒಂದು ಶಿಕ್ಷಣನೀತಿ ಜಾರಿಯಾಗಬೇಕು.ಕೇರಳ ಸಂಕಷ್ಟಕ್ಕೆ  ವಿದೇಶಿ ನೆರವನ್ನು ಕೇಂದ್ರ ನಿರಾಕರಿಸುವದು ಖಂಡನೀಯ. ಆದರೆ ಕೇಂದ್ರವು ಪಾರ್ಟಿಫಂಡ್‍ಗಾಗಿ ವಿದೇಶಿಫಂಡ್ ಸ್ವೀಕರಿಸುತ್ತಿದೆ. ಈ ಕುರಿತು ಕಾನೂನು ತಿದ್ದುಪಡಿ ಸಹ ಆಗಿದೆ ಇದು ಸರಿಯೇ? ಎಂದ ಅವರು ಮುಂದಿನ ಗಣರಾಜ್ಯ ದಿನೋತ್ಸವದಂದು ದೆಹಲಿಯಲ್ಲಿ  ಬೃಹತ್ ಸಮಾವೇಶ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದರು..

Leave a Comment