ಆರ್‍ಸಿಇಪಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ

 

ಕಲಬುರಗಿ ಅ 16: ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ನಡುವಿನ  ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ( ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸೇರಿಕೊಳ್ಳಬಾರದು ಎಂದು ಸ್ವದೇಶಿ ಜಾಗರಣ ಮಂಚ್  ಸಂಘಟನೆ ಆಗ್ರಹಿಸಿದೆ.

ಸಂಘಟನೆ ವಿಚಾರ ವಿಭಾಗದ ರಾಷ್ಟ್ರೀಯ ಅಧಿಕಾರಿ ಸತೀಶಜೀ ಅವರು ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆರ್‍ಸಿಇಪಿ ಒಪ್ಪಂದಕ್ಕೆ  ಸೇರುವದು ಭಾರತಕ್ಕೆ ಸುಲಭದ ವಿಷಯವಲ್ಲ.ಇದರಲ್ಲಿ ಅನುಕೂಲಗಳಿಗಿಂತ  ಅನಾನೂಕೂಲಗಳೇ ಹೆಚ್ಚಿವೆ. ಇವನ್ನೆಲ್ಲಾ ಸರಿಯಾಗಿ ಅಳೆದು ತೂಗಿ ನೋಡಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಕಳೆದ ಆಗಸ್ಟ್ ನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು ಹಲವಾರು ಉದ್ದಿಮೆದಾರರೊಂದಿಗೆ ಆರ್‍ಸಿಇಪಿ        ಬಗ್ಗೆ ಸಭೆ ನಡೆಸಿದರು. ಸಭೆಯಲ್ಲಿ ಸ್ಟೀಲ್,ಯಂತ್ರೋಪಕರಣಗಳು, ಔಷಧಿ, ಜವಳಿ, ಮೀನುಗಾರಿಕೆ, ವಾಹನಗಳು ,ಜವಳಿ ಮುಂತಾದ ಉದ್ಯಮಪತಿಗಳು ಪಾಲ್ಗೊಂಡರು. ಎಲ್ಲರೂ ಆರ್‍ಸಿಇಪಿಯಿಂದ ತಮ್ಮ ಉದ್ಯಮಕ್ಕೆ ಭಾರಿ ಅಪಾಯ ಇದೆ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.ಸಭೆಯಲ್ಲಿ ಭಾಗವಹಿಸದ ಹೈನುಗಾರಿಕೆ ,ಪೇಪರ್, ಮತ್ತು ಚಹಾ ಉದ್ಯಮದವರೂ ಸಹ ಆರ್‍ಸಿಇಪಿ ಒಪ್ಪಂದದಿಂದ ಭಾರತಕ್ಕೆ ಮತ್ತು ತಮ್ಮ ಉದ್ಯಮಕ್ಕೆ ಭಾರಿ ಆಪತ್ತು ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸೇವಾ ಕ್ಷೇತ್ರದಲ್ಲಿ ಭಾರತದ ವ್ಯಕ್ತಿಗಳ ಮುಕ್ತ ಪ್ರವೇಶಕ್ಕೆ ಒಪ್ಪಲು ಇತರ ದೇಶಗಳು ಸಿದ್ಧವಿಲ್ಲ. ಅಲ್ಲದೇ ಶೇ 90 ರಷ್ಟು  ಸರಕುಗಳನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳುವ ಬಗ್ಗೆಯೂ ಅವು ಹಠಮಾರಿ  ಧೋರಣೆ ತಳೆದಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹಾದೇವಯ್ಯ ಕರದಳ್ಳಿ, ಎಸ್ ಸಿ ಪಾಟೀಲ,ನೀರಜ್ ಮಳಖೇಡಕರ್ ಸೇರಿದಂತೆ ಹಲವರಿದ್ದರು..

Leave a Comment