ಆರ್‌ಸಿಬಿ-ಪಂಜಾಬ್‌ ನಡುವೆ ಫೈಟ್‌

ಇಂದೋರ್‌: ತವರಿನಲ್ಲಿ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ ಗೆಲುವು ಕಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದೆ. ಇಂದೋರ್‌ನ ಹೋಳ್ಕರ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ.

ತಂಡದ ಪ್ರಮುಖ ಆಟಗಾರರಾದ ವಿರಾಟ್‌ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್‌ ಅವರ ಅನುಪಸ್ಥಿತಿಯಲ್ಲೂ ಆರ್‌ಸಿಬಿ ತಂಡದ ಉಳಿದ ಆಟಗಾರರು ಜವಾಬ್ದಾರಿಯುತ ಆಟ ಪ್ರದರ್ಶಿಸಿ ಬೆಂಗಳೂರು ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಒಂದು ಗೆಲುವು, ಒಂದು ಸೋಲು ದಾಖಲಿಸಿರುವ ಆರ್‌ಸಿಬಿ ಪಾಯಿಂಟ್‌ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಇನ್ನು ಕೊಹ್ಲಿ ಇಂದಿನ ಪಂದ್ಯದಲ್ಲಿ ಆಡುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಇನ್ನೋರ್ವ ಆಟಗಾರ ಎಬಿಡಿ ವಿಲಿಯರ್ಸ್ ಆಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಇವ್ಯಾವು ಅಧಿಕೃತವಾಗಿ ಹೊರಗೆ ಬಂದಿಲ್ಲ. ಕಳೆದೆರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ವ್ಯಾಟ್ಸನ್‌ ಹಂಗಾಮಿ ನಾಯಕರಾಗಿ ಮತ್ತೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.

ಇನ್ನು ಪಂಜಾಬ್‌ ಏಕೈಕ ಪಂದ್ಯವಾಡಿದ್ದು, ನಾಯಕ ಮ್ಯಾಕ್ಸ್‌ವೆಲ್‌ ಸಹಾಯದಿಂದ ಸುಲಭ ಗೆಲುವು ದಾಖಲಿಸಿದೆ. 20 ಎಸೆತಗಳಲ್ಲಿ ಭರ್ಜರಿ 44 ರನ್‌ ಬಾರಿಸಿದ ಮ್ಯಾಕ್ಸ್‌ವೆಲ್‌ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಪಂದ್ಯ ಗೆದ್ದು ಬೀಗಿದರು.

ಪಂಜಾಬ್‌ ತಂಡದಲ್ಲಿ ಮೊರ್ಗನ್‌, ಡರೇನ್‌ ಸಾಮಿ, ಮಾರ್ಟಿನ್‌ ಗಪ್ಟಿಲ್‌ ಎಂಬ ಬಲಿಷ್ಠ ಬ್ಯಾಟಿಂಗ್‌ ದಿಗ್ಗಜರು ಇದ್ದಾರೆ. ಬೌಲಿಂಗ್‌ನಲ್ಲೂ ಪಂಜಾಬ್‌ ಉತ್ತಮವಾಗಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಯಾರಿಗೆ ಎಂಬುದನ್ನು ಕಾದು ನೋಡಬೇಕಿದೆ.

ತಂಡಗಳು

ಆರ್‌ಸಿಬಿ: ಶೇನ್‌ ವಾಟ್ಸನ್‌, ಕ್ರಿಸ್‌ ಗೇಲ್‌, ಮನ್‌ದೀಪ್‌ ಸಿಂಗ್‌, ಟ್ರೆವಿಸ್‌ ಹೆಡ್‌, ಕೇದಾರ್‌ ಜಾಧವ್‌, ಯುಜವೇಂದ್ರ್‌ ಚಹಲ್‌, ಸ್ಟುವರ್ಟ್‌ ಬಿನ್ನಿ, ಟೈಮಲ್‌ ಮಿಲ್ಸ್‌, ಅನಿಕೇತ್‌ ಚೌಧರಿ, ಶ್ರೀನಾಥ್‌ ಅರವಿಂದ್‌, ಅಬು ನಚೀಮ್, ತಬರೆಜ್ ಶಮ್ಸಿ, ಪ್ರವೀಣ್‌ ದುಬೆ, ಇಕ್ಬಾಲ್‌ ಅಬ್ದುಲ್ಲಾ, ಅಕ್ಷಯ್‌ ಕಾರ್ನವಾರ್‌, ವಿಕ್ರಮ್‌ಜಿತ್‌ ಮಲಿಕ್‌, ಪರ್ವೇಜ್‌ ರಸೂಲ್‌, ಹರ್ಷಲ್‌ ಪಟೇಲ್‌, ಕೇನ್‌ ರಿಚರ್ಡಸನ್‌, ಸಚಿನ್‌ ಬೇಬಿ, ಡೆವಿಡ್‌ ವೈಸೆ, ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌.

ಪಂಜಾಬ್‌: ಡೆವಿಡ್‌ ಮಿಲ್ಲರ್‌, ಮನನ್‌ ವೊಹ್ರಾ, ಅಕ್ಷರ್‌ ಪಟೇಲ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ (ನಾಯಕ), ಗುರ್‌ಕಿರತ್‌ ಸಿಂಗ್‌ ಮನ್‌, ಅನುರೀತ್‌ ಸಿಂಗ್‌, ಸಂದೀಪ್‌ ಶರ್ಮಾ, ಶಾನ್‌ ಮಾರ್ಷ್‌, ವೃದ್ಧಿಮಾನ್‌ ಸಾಹಾ, ಮುರುಳಿ ವಿಜಯ್‌, ನಿಖಿಲ್‌ ನೈಕ್‌, ಮೋಹಿತ್‌ ಶರ್ಮಾ, ಮರ್ಕಸ್‌ ಸ್ಟೋನಿಸ್‌, ಕೆಸಿ ಕರಿಯಪ್ಪ, ಅರಮಾನ್‌ ಜಾಫರ್‌, ಪ್ರದೀಪ್‌ ಸಾಹು, ಸ್ವಪ್ನಿಲ್‌ ಸಿಂಗ್‌, ಹಾಶೀಮ್‌ ಆಮ್ಲಾ, ವರುಣ್‌ ಆ್ಯರೋನ್, ಇಯಾನ್‌ ಮಾರ್ಗನ್‌, ಮ್ಯಾಟ್‌ ಹೆನ್ರಿ, ರಾಹುಲ್‌ ತೆವಾಟಿಯಾ, ಮಾರ್ಟಿನ್‌ ಗಪ್ಟಿಲ್‌, ಡರೇನ್‌ ಸಾಮಿ, ರಿಂಕು ಸಿಂಗ್‌, ನಟರಾಜನ್‌.

Leave a Comment