ಆರ್‌ಸಿಬಿಗೆ ಎಬಿಡಿ ನಾಯಕ?

ಬೆಂಗಳೂರು, ಸೆ ೭- ಮುಂದಿನ ಐಪಿಎಲ್‌ಗಾಗಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಮೇಜರ್ ಸರ್ಜರಿ ನಡೆದಿದೆ. ತಂಡಕ್ಕೆ ವಿರಾಟ್ ಕೊಹ್ಲಿ ಬದಲಾಗಿ ಎಬಿಡಿ ಅವರನ್ನು ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎನ್ನಲಾಗುತ್ತಿದೆ.

ಈಗಾಗಲೇ ತಂಡದ ಕೋಚ್ ಸ್ಥಾನದಿಂದ ಡೇನಿಯಲ್ ವೆಟ್ಟೋರಿ ಅವರನ್ನ ಕೈ ಬಿಟ್ಟಿರುವ ರಾಯಲ್ ಚಾಲೆಂಜರ್ಸ್ ಆ ಸ್ಥಾನಕ್ಕೆ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕ್ರಿಸ್ಟನ್ ಹಾಗೂ ಆಶಿಸ್ ನೆಹ್ರಾ ಅವರನ್ನ ಆಯ್ಕೆ ಮಾಡಿದ್ದು, ತಂಡವನ್ನ ಸಂಪೂರ್ಣ ಪುನರ್ ರಚನೆಗೆ ಮುನ್ನುಡಿ ಬರೆದಿದೆ.

ಐಪಿಎಲ್ ಮಾದರಿ ಆರಂಭವಾದಾಗಿನಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಒಂದೇ ಒಂದು ಪಂದ್ಯವನ್ನ ಗೆಲ್ಲಲು ಸಾಧ್ಯವೇ ಆಗಿಲ್ಲ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ತಂಡ ಹೇಳಿಕೊಳ್ಳುವ ಸಾಧನೆಯನ್ನೂ ಮಾಡಿಲ್ಲ. ಹೀಗಾಗಿ ತಂಡ ಅಮೂಲಾಗ್ರ ಬದಲಾವಣೆ ಮಾಡಲು ಮುಂದಾಗಿದೆ.

ಈ ಭಾಗವಾಗಿ ಈಗಾಗಲೇ ತರಬೇತುದಾರರನ್ನು ಕಿತ್ತೆಸೆದು ಗುರು ಗ್ಯಾರಿಯನ್ನ ನೇಮಕ ಮಾಡಲಾಗಿದೆ. ಇನ್ನು ತಂಡದ ನಾಯಕತ್ವ ಬದಲಾವಣೆಗೂ ಮುಂದಾಗಿದೆ ಎಂಬ ಮಾಹಿತಿ ಬರುತ್ತಿದ್ದು, ವಿರಾಟ್ ಕೊಹ್ಲಿ ಬದಲಿಗೆ ಎಬಿ ಡಿ ವಿಲಿಯರ್ಸ್ ಹೆಗಲಿಗೆ ತಂಡದ ಹೊಣೆ ಹೆಗಲೇರಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

Leave a Comment