ಆರ್‌ಡಿಎ‌ ಅಧ್ಯಕ್ಷ ಸ್ಥಾನ : ಯಲ್ಲಪ್ಪ ನೇಮಕಕ್ಕೆ ಮನವಿ

ರಾಯಚೂರು.ಜೂ.19- ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ನಗರಸಭೆ ಸದಸ್ಯರು ಹಾಗೂ ಜಾದಳ ಪಕ್ಷದ ಪರಿಶಿಷ್ಟ ಜಾತಿ ಜಿಲ್ಲಾ ಅಧ್ಯಕ್ಷರಾದ ಪಿ.ಯಲ್ಲಪ್ಪ ಅವರನ್ನು ನೇಮಿಸುವಂತೆ ಅಖಿಲ ಕರ್ನಾಟಕ ಡಾ.ಬಾಬು ಜಗಜೀವನರಾಮ ಯುವಕ ಸಂಘ ಒತ್ತಾಯಿಸಿದೆ.
ನಿನ್ನೆ ಉಸ್ತುವಾರಿ ಸಚಿವ ವೆಂಕಟರಾವ್ ನಾ‌ಡಗೌಡ ಅವರಿಗೆ ಈ ಕುರಿತು ಮನವಿ ನೀಡಿ, ಪಿ.ಯಲ್ಲಪ್ಪ ಅವರು ಜಾದಳ ಪಕ್ಷದಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಾ, ಬಂದಿದ್ದಾರೆ. ಜಾದಳ ಪಕ್ಷದ ಕಟ್ಟ ಅಭಿಮಾನಿಯಾಗಿದ್ದಾರೆ. 20 ನೇ ವಾರ್ಡಿನಲ್ಲಿ ಸತತವಾಗಿ ಜಾದಳ ಪಕ್ಷದಿಂದ ಎರಡು ಸಲ ನಗರಸಭೆ ಸದಸ್ಯರಾಗಿದ್ದಾರೆ. ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದ ಅವರು, ರಾಜಕೀಯವಾಗಿ ಚಿರಪರಿಚಿತರು.
ಇವರ ಸೇವೆ ಪರಿಗಣಿಸಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆ ಮನವಿ ಮಾ‌ಡಿದ್ದಾರೆ. ಜಿ.ಪಂ., ತಾ.ಪಂ., ಚುನಾವಣೆಗಳಲ್ಲಿ ಪಕ್ಷ ಉತ್ತಮ ಗೆಲುವು ಸಾಧಿಸಿತು. ಇವರು ನೆರವಾಗಿದ್ದಾರೆ. ಸರ್ಕಾರದಿಂದ ಬಂದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆಂದು ಜಿಲ್ಲಾಧ್ಯಕ್ಷ ಜಂಬಣ್ಣ, ಕೆ.ಭೀಮಾರೆಡ್ಡಿ, ನರಸಿಂಹಲು, ನಾಗಪ್ಪ, ತಿಮ್ಮಪ್ಪ ಅವರು ಮನವಿ ನೀಡಿದ್ದಾರೆ.

Leave a Comment