ಆರ್ಯವೈಶ್ಯ ಶ್ರೀ ನಗರೇಶ್ವರ ದೇವಸ್ಥಾನ: ನೂತನ ಪದಾಧಿಕಾರಿಗಳ ಆಯ್ಕೆ

ರಾಯಚೂರು.ಆ.13- ಆರ್ಯವೈಶ್ಯ ಸಮಾಜ ಶ್ರೀ ನಗರೇಶ್ವರ ದೇವಸ್ಥಾನ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಆರ್ಯವೈಶ್ಯ ಸಮಾಜದ ಶ್ರೀ ನಗರೇಶ್ವರ ದೇವಸ್ಥಾನ ಸಮಿತಿಯಿಂದ ಇತ್ತೀಚಿಗೆ ಆರ್ಯವೈಶ್ಯ ಸಮಾಜ ಬಾಂಧವರ ಸರ್ವ ಸದಸ್ಯರ ಸಭೆ ನಡೆಸಿ ಸರ್ವಾನುಮತದಿಂದ ಆರ್ಯವೈಶ್ಯ ಸಮಾಜ ನಗರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ಅವರಿಗೆ ದೇವಸ್ಥಾನ ಸಮಿತಿ ಕಾರ್ಯಕಾರಿ ಮಂಡಳಿ ರಚಿಸಲು ಸರ್ವಾನುಮತದ ಅಧಿಕಾರ ನೀಡಲಾಗಿತ್ತು.
ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ಅವರು, ಕಾರ್ಯಕಾರಿ ಆಡಳಿತ ಮಂಡಳಿಗೆ ಹಿರಿಯ ಉಪಾಧ್ಯಕ್ಷರು ಹಾಗೂ ಧಾರ್ಮಿಕ ಅಧ್ಯಕ್ಷರನ್ನಾಗಿ ಆರ್.ಹೆಚ್.ಸೂರ್ಯನಾರಾಯಣ ಶೆಟ್ಟಿ, ಉಪಾಧ್ಯಕ್ಷರಾಗಿ ಇಲ್ಲೂರು ಗೋಪಾಲಯ್ಯ ಶೆಟ್ಟಿ ಹಾಗೂ ಬಿ.ಜಗದೀಶ ಗುಪ್ತರ ಅವರನ್ನು, ಕಾರ್ಯದರ್ಶಿಯನ್ನಾಗಿ ಚಿರಗಂ ಭಟ್ಲ ಪದ್ಮರಾಜ್, ಕೋಶಾಧ್ಯಕ್ಷರನ್ನಾಗಿ ಜಟ್ರಂ ಶ್ರೀನಿವಾಸ, ಜಂಟಿ ಕಾರ್ಯದರ್ಶಿಯನ್ನಾಗಿ ಮಾಚರ್ಲಾ ಸುರೇಶ ಅವರನ್ನು, ಲೆಕ್ಕಪರಿಶೋಧಕರಾಗಿ ನೆಲ್ಲೂರು ಶ್ರೀನಿವಾಸ ವಕೀಲ ಅವರನ್ನು, ಚೀಪ್ ಅಡ್ವೈಸರ್‌ರಾಗಿ ಮೈಲಾಪೂರು ಲಚ್ಚಣ್ಣ, ಕಾನೂನು ಸಲಹೆಗಾರರಾಗಿ ಕೆ.ಸಿ.ವೀರೇಶ ವಕೀಲರು, ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ಕೆ.ಭೀಮಾ ಶಂಕರ, ಮಂಚಾಲ ಕಿರಣ, ಜಟ್ರಂ ವೆಂಕಟೇಶ್, ದೇವನಪಲ್ಲಿ ಯಂಕಣ್ಣ ಶೆಟ್ಟಿ, ಅಂಬಾಟಿ ವೆಂಕಟರಾಜು, ಬಿ.ಗೋವಿಂದ (ಪೆಪ್ಸಿ), ಗಾಣಧಾಳ ಲಕ್ಷ್ಮೀಪತಿ, ಚ್ಯಾಗಿ ವೆಂಕಟೇಶ, ಅಳ್ಳುಂಡಿ ವೀರಯ್ಯ ಶೆಟ್ಟಿ, ವಿಜ್ಞಾನ ವೆಂಕಟೇಶ, ಆಲೂರು ವೆಂಕಟೇಶ ವಕೀಲರು, ದೇವಗಾರಿ ಸತೀಶ, ಎಂ.ಆರ್.ಶ್ರೀನಿವಾಸ, ಕೆ.ಹೆಚ್.ವೀರೇಶ ಬಾಬು, ಶ್ರೀಮತಿ ತೋರಣಾಳ ವೀಣಾ ಹಾಗೂ ನಾಮ ನಿರ್ದೇಶಕ ಸದಸ್ಯರನ್ನಾಗಿ ಜಟ್ರಂ ಗೋವಿಂದ ರಾಜು, ರಾಜಲಬಂಡಿ ನಾಗರಾಜ್, ದೇವನಪಲ್ಲಿ ವಾಸುದೇವ, ಕಟ್ಕಂ ಅಮರೇಶ್, ಎಂ.ಬಿ.ಎನ್.ಆರ್. ಶ್ರೀನಿವಾಸ್, ಪಾಲಟ್ಲಿ ಬಸವರಾಜ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಪ್ರಕಟಿಸಿದರು.
ರವಿವಾರ ನೂತನ ಪದಾಧಿಕಾರಿಗಳ ಸಭೆ ನಡೆದು, ಪದಗ್ರಹಣ ಮಾಡಿದರು. ಎಲ್ಲಾ ಪದಾಧಿಕಾರಿಗಳಿಗೆ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ಅವರು ಹೂಗುಚ್ಚ ನೀಡಿ ಸ್ವಾಗತ ಕೋರಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ ವರ್ಗದವರನ್ನು ನೂತನ ಕಾರ್ಯಕಾರಿ ಮಂಡಳಿಗೆ ಪರಿಚಯಿಸಿದರು.
ನೂತನವಾಗಿ ನೇಮಕಗೊಂಡ ಕಾರ್ಯಕಾರಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ನಾಮ ನಿರ್ದೇಶಕರು, ಅಧ್ಯಕ್ಷರಾದ ಕೊಂಡಾ ಕೃಷ್ಣಮೂರ್ತಿಯವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಂಡಾ ಕೃಷ್ಣಮೂರ್ತಿಯವರು ಮಾತನಾಡಿ, ನಾವೆಲ್ಲರೂ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸೋಣ. ಸಮಾಜದ ವತಿಯಿಂದ ಸುಂದರವಾದ ನೂತನ ಕಲ್ಯಾಣ ಮಂಟಪದ ಕಾರ್ಯ ಶ್ರೀಘ್ರದಲ್ಲಿ ಪ್ರಾರಂಭಿಸೋಣ, ಇದಕ್ಕೆ ಸಮಸ್ತ ಆರ್ಯವೈಶ್ಯ ಬಾಂಧವರ ಸಹಕಾರ ತನು-ಮನ-ಧನದಿಂದ ಶ್ರಮಿಸೋಣ. ನನ್ನ ಉಸಿರಿರುವವರೆಗೂ ಸಮಾಜಕ್ಕಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದಗ್ರಹಣ ಮಾಡಿದ ಕಾರ್ಯಕಾರಿ ಮಂಡಳಿ ಎಲ್ಲಾ ಸದಸ್ಯರು ಹಾಗೂ ನಾಮನಿರ್ದೇಶಕರು ತಮ್ಮ-ತಮ್ಮ ಅನಿಸಿಕೆಯನ್ನು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಸಮಾಜದ ಸಕಲ ಕಾರ್ಯಗಳಿಗೆ ಸದಾ ಸಿದ್ದರಿದ್ದೇವೆ ಎಂದು ಹೇಳಿದರು. ಜಂಟಿ ಕಾರ್ಯದರ್ಶಿ ಮಾಚರ್ಲಾ ಸುರೇಶ್ ವಂದಿಸಿದರು.

Leave a Comment