ಆರ್ಯವೈಶ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿ
ರಾಯಚೂರು.ನ.01- ಶ್ರೀಮಂತಿಕೆಗಿಂತ ವಿದ್ಯೆ ಮತ್ತು ಸಂಸ್ಕಾರ ಮುಖ್ಯವಾಗಿದ್ದು, ಈ ದಿಕ್ಕಿನಲ್ಲಿ ಸಮಾಜ ಹೆಚ್ಚಿನ ಕಾರ್ಯ ನಿರ್ವಹಿಸುವ ಮೂಲಕ ಉತ್ತಮ ನಾಗರೀಕ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಆರ್ಯವೈಶ್ಯ ಸಮಾಜದ ಹಿರಿಯ ಮುಖಂಡ ಇಲ್ಲೂರು ಗೋಪಾಲಯ್ಯಶೆಟ್ಟಿ ಅವರು ಹೇಳಿದರು.
ಅವರಿಂದು ಆರ್ಯವೈಶ್ಯ ಅಧಿಕಾರಿಗಳು ಹಾಗೂ ವೃತ್ತಿ ನಿರತರ ಸಂಘ ರಾಯಚೂರು ವತಿಯಿಂದ ಆರ್ಯವೈಶ್ಯ ಗೀತಾ ಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ದುಬಾರಿಯಾಗಿದೆ. ಆರ್ಥಿಕ ಸ್ಥಿತಿವಂತರಿಗೆ ವಿದ್ಯಾಭ್ಯಾಸ ಸಮಸ್ಯೆಯಲ್ಲ.
ಆದರೆ, ಬಡ ಕುಟುಂಬದ ಪ್ರತಿಭಾವಂತರಿಗೆ ಆದರಲ್ಲೂ ಆರ್ಯವೈಶ್ಯ ಸಮಾಜದ ಮಕ್ಕಳ ವಿದ್ಯಾಭ್ಯಾಸ ಕಷ್ಟದಾಯಕವಾಗಿದೆ.
ಆರ್ಯವೈಶ್ಯ ಸಮುದಾಯದ ಬಡ ಕುಟುಂಬದವರಿಗೆ ಶ್ರೀವಂತರು ಸಹಾಯಹಸ್ತ ನೀಡುವ ಮೂಲಕ ನೆರವಾಗಬೇಕು. ಇದು ಆರ್ಯವೈಶ್ಯ ಸಮಾಜಕಕ್ಕೆ ಮಾಡುವ ನಿಜವಾದ ಸೇವೆಯಾಗಿದೆ. ಆರ್ಯವೈಶ್ಯ ಸಮಾಜದಲ್ಲಿನ ಪ್ರತಿಭಾವಂತರನ್ನು ಗುರುತಿಸಿ, ಪುರಸ್ಕೃತಿಸುತ್ತಿರುವುದು ಶ್ಲಾಘನೀಯವಾಗಿದೆ.
ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯೆನಿಸುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಸೇರಿಕೊಂಡು ಈ ರೀತಿಯ ಕಾರ್ಯಕ್ರಮ ನಿರಂತರ ಹಮ್ಮಿಕೊಳ್ಳಲು ತನು-ಮನ-ಧನದಿಂದ ಸಹಾಯ ಮಾಡುವ ಅಗತ್ಯವಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ಶಾಶ್ವತ ನಿಧಿಯಾಗಿ 1 ಲಕ್ಷ ರೂ. ದೇಣಿಗೆ ನೀಡುತ್ತೇನೆಂದು ಘೋಷಿಸಿದರು. ಇದೇ ಸಂದರ್ಭದಲ್ಲಿ ವೈಶ್ಯಧರ್ಮ ರತ್ನಾಕರ ಪ್ರಶಸ್ತಿ ನೀಡುವ ಮೂಲಕ ಮಹಾದಾನಿಗಳಾದ ಇಲ್ಲೂರು ಗೋಪಾಲಯ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಅವೋಪಗಳ ಒಕ್ಕೂಟದ ಅಧ್ಯಕ್ಷ ಬೆಲ್ದಿ ಶ್ರೀಧರ, ಕರ್ನಾಟಕ ರಾಜ್ಯ ಅವೋಪಗಳ ಒಕ್ಕೂಟದ ಉಪಾಧ್ಯಕ್ಷ ಡಾ.ಕಟ್ಟಾರಾಮು ಮೋಹನ್, ಕಲ್ಬುರ್ಗಿ ವಿಭಾಗೀಯ ಉಪಾಧ್ಯಕ್ಷ ಜಿ.ವಿ.ಎನ್. ಪುಲ್ಲಯ್ಯ, ಅವೋಪ ಅಧ್ಯಕ್ಷ ಕಲ್ಲೂರು ರಮೇಶ ಕುಮಾರ ವಕೀಲರು ಅಧ್ಯಕ್ಷತೆಯನ್ನು ವಹಿಸಿದ್ದರು. ಅವೋಪ ಕಾರ್ಯದರ್ಶಿ ಹಿಂಗೂಲಿ ನರೇಂದ್ರ, ಉಪಾಧ್ಯಕ್ಷ ಭಂಡಾರಿ ವೀರಣ್ಣ ಶೆಟ್ಟಿ, ಕೋಶಾಧ್ಯಕ್ಷ ಪೆಂಡಲ್ ಕಿಶೋರ ಹಾಗೂ ಸಮಾಜದ ಎಲ್ಲಾ ಬಾಂಧವರು ಉಪಸ್ಥಿತರಿದ್ದರು.

Leave a Comment