ಆರ್ಥಿಕ ಸಮೀಕ್ಷೆ: 2021 ರ ವೇಳೆಗೆ ರೈಲ್ವೆ ಬ್ರಾಡ್ ಗೇಜ್ ಜಾಲ ಶೇ.100ರಷ್ಟು ವಿದ್ಯುದೀಕರಣ

  ನವದೆಹಲಿ, ಜುಲೈ 4 – ಡೀಸೆಲ್ ಆಮದು ಮೇಲೆ ರಾಷ್ಟ್ರದ ಅವಲಂಬನೆಯನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ತನ್ನ ಬ್ರಾಡ್ ಗೇಜ್ ಜಾಲದಲ್ಲಿ ಶೇ.100ರಷ್ಟು ವಿದ್ಯುದೀಕರಣಗೊಳಿಸುವ ಮಹತ್ವದ ಯೋಜನೆಯನ್ನು ಆರಂಭಿಸಿದೆ ಎಂದು ಗುರುವಾರ ಸಂಸತ್ತಿನಲ್ಲಿ

 ಮಂಡಿಸಲಾದ 2018-19 ರ ಆರ್ಥಿಕ ಸಮೀಕ್ಷೆ ತಿಳಿಸಿದೆ.

 ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2018-19ರ ಆರ್ಥಿಕ ಸಮೀಕ್ಷೆಯಲ್ಲಿ ಏಪ್ರಿಲ್ 1, 2019 ರ ವೇಳೆಗೆ ರೈಲ್ವೆ 35,488 ಕಿ.ಮೀ ಮಾರ್ಗದ ವಿದ್ಯುದೀಕರಣ ಪೂರ್ಣಗೊಳಿಸಿದೆ. ಇದು ಒಟ್ಟು ಜಾಲದ ಶೇ. 51.85ರಷ್ಟಾಗಿದ್ದು, ಈ ಮಾರ್ಗಗಳಲ್ಲಿ ಶೇ. 64.50ರಷ್ಟು ಸರಕು  ಸಾಗಣೆಯಾಗುತ್ತಿದ್ದರೆ ಶೇ.53.70 ರಷ್ಟು ಪ್ರಯಾಣಿಕ ಸಂಚಾರವಾಗುತ್ತಿದೆ. ವಿದ್ಯುದೀಕರಣ ಕಾಮಗಾರಿಗಳ ವೇಗವನ್ನು ಹೆಚ್ಚಿಸಲಾಗಿದ್ದು, 2021 ರ ವೇಳೆಗೆ ಒಟ್ಟು 38,000 ಕಿ.ಮೀ. ಮಾರ್ಗವನ್ನು  ವಿದ್ಯುದೀಕರಣಕ್ಕಾಗಿ ಗುರುತಿಸಲಾಗಿದೆ.

 ರೈಲ್ವೆಗಳ ಢಿಕ್ಕಿ ಘಟನೆಗಳ ಸಂಖ್ಯೆ 2018-19ನೇ ಸಾಲಿನಲ್ಲಿ ಶೂನ್ಯಕ್ಕೆ ಇಳಿದಿದೆ. 2016 -17ರಲ್ಲಿ ಶೇ. 78ರಷ್ಟಿದ್ದ ಹಳಿ ತಪ್ಪುವ ಘಟನೆಗಳು 2018-19ರಲ್ಲಿ ಶೇ.46ಕ್ಕೆ ಇಳಿದಿವೆ ಎಂದು ಸಮೀಕ್ಷೆ ಹೇಳಿದೆ.

 2018-19ರಲ್ಲಿ ರೈಲ್ವೆ 1221.39 ದಶಲಕ್ಷ ಟನ್ ಸರಕು ಸಾಗಣೆ ಮಾಡಿದ್ದು, 2017-18ರ ಸರಕು ಸಾಗಣೆಗಿಂತ 61.84 ದಶಲಕ್ಷ ಟನ್‍ ಏರಿಕೆ ಮೂಲಕ ಶೇ. 5.33 ರಷ್ಟು ಹೆಚ್ಚಳ ದಾಖಲಿಸಿದೆ.  2017-18ರಲ್ಲಿ ಭಾರತೀಯ ರೈಲ್ವೆ ಸಾಗಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ 2.09 ರಷ್ಟು ಹೆಚ್ಚಳವಾಗಿದೆ. 2017-18ಕ್ಕೆ ಹೋಲಿಸಿದರೆ 2018-19ರಲ್ಲಿ ಪ್ರಯಾಣಿಕರ ಸಾಗಣೆಯಲ್ಲಿ ಶೇ. 0.64 ರಷ್ಟು ಹೆಚ್ಚಳವಾಗಿದೆ.

 ರೈಲ್ವೆಯ ಸರಕು ಸಾಗಣೆ ಮತ್ತು ಪ್ರಯಾಣಿಕರ ಕಾರ್ಯಕ್ಷಮತೆಯನ್ನು ಪ್ರಸ್ತಾಪಿಸಿರುವ ಸಮೀಕ್ಷೆ, 2016-17ರಲ್ಲಿ 1106.15 ದಶಲಕ್ಷ ಟನ್‍ನಷ್ಟಿದ್ದ ಸರಕು ಸಾಗಣೆ (ಕೊಂಕಣ ರೈಲ್ವೆ ಹೊರತುಪಡಿಸಿ) 2017-18ರ ಅವಧಿಯಲ್ಲಿ 1159.55 ದಶಲಕ್ಷ ಟನ್‍ಗಳಿಗೆ ತಲುಪಿದೆ.

  ಸ್ವಚ್ಛ ಭಾರತ್‍ ಅಭಿಯಾನಕ್ಕೆ ರೈಲ್ವೆ ವಿಶೇಷ ಒತ್ತು ನೀಡಿದೆ ಎಂದು ಸಮೀಕ್ಷೆ ತಿಳಿಸಿದೆ.

Leave a Comment