ಆರ್ಥಿಕ ಚಟುವಟಿಕೆ ಪುನಾರಂಭ; ಹೆಚ್ಚಿನ ಎಚ್ಚರಿಕೆ ಅಗತ್ಯ-ಮೋದಿ

 

ನವದೆಹಲಿ, ಮೇ 31- ದೇಶದಲ್ಲಿ ಸೋಮವಾರದಿಂದ ಆರ್ಥಿಕ ಚಟುವಟಿಕೆಗಳು ಆರಂಭಗೊಳ್ಳುವುದರಿಂದ ಜನರು ತಮ್ಮ ಎಚ್ಚರಿಕೆಯಲ್ಲಿ ಮುಂದುವರಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಭಾನುವಾರ ರೇಡಿಯೋದಲ್ಲಿ ಪ್ರಸಾರವಾದ 65ನೇ ‘ಮನ್ ಕಿ ಬಾತ್’ ಮಾಸಿಕ ಬಾನುಲಿ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶ ಕಳೆದ ಎರಡು ತಿಂಗಳ ಲಾಕ್ ಡೌನ್ ನಿಂದ ಹೊರ ಬಂದಿದೆ ಎಂದಿದ್ದು, ಲಾಕ್ ಡೌನ್ 5.0 ಅನ್ನು ‘ಅನ್ ಲಾಕ್ 1.0’ ಎಂದು ಬಣ್ಣಿಸಿದ್ದಾರೆ.
ದೇಶದಲ್ಲಿ ಪ್ರಮುಖ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಂಡಿವೆ. ಆದರೆ, ಜನರು ಆರು ಅಡಿಯ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಸಾಧ್ಯವಾದಷ್ಟು ಮನೆಯೊಳಗೇ ಇರುವುದನ್ನು ಮುಂದುವರಿಸಬೇಕು. ಜನರು ಈಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬರ ಸಹಕಾರದಿಂದ ಕೋವಿಡ್ -19 ವಿರುದ್ಧ ಸದೃಢವಾಗಿ ಹೋರಾಡಲಾಗುವುದು ಎಂದರು.
ಸಂಕಷ್ಟದ ಸಮಯದಲ್ಲಿ ದೇಶದ ಜನರ ಸಹಕಾರವನ್ನು ಅಭಿನಂದಿಸಿದ ಮೋದಿ, ಪ್ರತಿ ಭಾರತೀಯರು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಭಾರತದ ಸೇವಾ ಶಕ್ತಿ ಹೋರಾಟದಲ್ಲಿ ಕಾಣಿಸುತ್ತಿದೆ ಎಂದು ಹೊಗಳಿದ್ದಾರೆ.

Share

Leave a Comment