‘ಆರ್ಥಿಕವಾಗಿ ಶ್ರೀಮಂತರಾದರೂ ಸಾಂಸ್ಕೃತಿಕವಾಗಿ ಬಡವರು’

ಉಜಿರೆ, ಜ. ೧೨- ಹಿಂದೆ ನಮಗೆ ಆರ್ಥಿಕ ಬಡತನವಿದ್ದರೂ , ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದೆವು. ಆದರೆ ಈಗ ಆರ್ಥಿಕವಾಗಿ ಶ್ರೀಮಂತರಾಗಿದ್ದೇವೆ. ಸಾಂಸ್ಕೃತಿಕವಾಗಿ ಬಡವರಾಗಿದ್ದೇವೆ ಎಂದು ಹಾಸ್ಯ ಸಾಹಿತಿ ಎಚ್.ದುಂಡಿರಾಜ್ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಾಂತಿವನಟ್ರಸ್ಟ್‌ನಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಆಶ್ರಯದಲ್ಲಿ “ಜ್ಞಾನ ಗಂಗೆ ಮತ್ತುಜ್ಞಾನತುಂಗೆ” ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ನೀಡುವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.

ಸಹಜವಾಗಿ ಬರೆದರೆಕಾವ್ಯಮಯವಾಗುತ್ತದೆ.ಒತ್ತಾಯಕ್ಕೆ ಬರೆದರೆಕಾವ್ಯ ಮಾಯವಾಗುತ್ತದೆ! ಪ್ರಾಥಮಿಕ ಶಾಲಾ ಹಂತದಲ್ಲೇಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.ಓದುವ, ಬರೆಯುವ ಆಸಕ್ತಿ ಹೊಂದಿರಬೇಕು.ಪ್ರಾಸ, ರಾಗ, ತಾಳ, ಲಯದ ಬಗ್ಯೆ ತಿಳುವಳಿಕೆ ಇದ್ದರೆ ಸುಲಭದಲ್ಲಿ ಕವನಗಳನ್ನು, ಚುಟುಕಗಳನ್ನು ರಚಿಸಬಹುದು.

ಅಂಕಗಳಿಕೆ, ಉದ್ಯೋಗಕ್ಕಾಗಿ ಮಕ್ಕಳ ಮೇಲೆ ಒತ್ತಡ ಹಾಕಬಾರದು.ಪಠ್ಯದಜೊತೆಗೆ ಪಠ್ಯೇತರಚಟುವಟಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಶಿಕ್ಷಕರು ಮತ್ತುರಕ್ಷಕರು ಪ್ರೋತ್ಸಾಹ ನೀಡಬೇಕು.ನೈತಿಕ ಮೌಲ್ಯಾಧಾರಿತ ಪುಸ್ತಕಗಳ ವಿತರಣೆ ಮೂಲಕ ಹೆಗ್ಗಡೆಯವರು ಶಿಕ್ಷಣದ ಮೂಲಕ ಸಭ್ಯ, ಸುಸಂಸ್ಕೃತ ನಾಗರಿಕರನ್ನುರೂಪಿಸುತ್ತಿದ್ದಾರೆ.ಸರ್ಕಾರ ಮಾಡಬೇಕಾದಕಾರ್ಯವನ್ನು ಹೆಗ್ಗಡೆಯವರು ಮಾಡುತ್ತಿರವುವುದು ಶ್ಲಾಘನೀಯಎಂದುಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಸಿ ಹಂಚಿದರೆ ವನಮಹೋತ್ಸವ. ಖುಷಿ ಹಂಚಿದರೆಜೀವನ ಮಹೋತ್ಸ.ಆದುದರಿಂದ ಕಲೆ, ಸಂಸ್ಕೃತಿ ಮೂಲಕ ಖುಷಿ ಹಂಚೋಣ.ಶಾಂತಿ, ನೆಮ್ಮದಿಯಜೀವನ ನಡೆಸೋಣಎಂದುಅವರು ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಕ್ಷಣದ ಮೂಲಕ ಜ್ಞಾನ ವೃದ್ಧಿಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯವೇದೇಶದ ಭಾಗ್ಯವಾಗಿದೆ.ಕೆಟ್ಟ ಗುಣಗಳನ್ನು ತ್ಯಜಿಸಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮಾನವರಾಗಬೇಕು. ವಿಶ್ವಮಾನವರಾಗಬೇಕು.ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನೂಕಲಿಯಬೇಕುಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.

Leave a Comment