ಆರೋಪ ಸುಳ್ಳಾಗಿದ್ದರೆ ರಾಜಕೀಯದಿಂದ ನಿವೃತ್ತನಾಗುವೆ : ಸಾ.ರಾ.ಮಹೇಶ್

ಮರು ಸವಾಲು ನವರಾತ್ರಿಯೊಳಗೆ ಪ್ರಮಾಣ ಮಾಡಿ ಇತ್ಯರ್ಥಗೊಳಿಸಿ
ಮೈಸೂರು.ಸೆ.23 : ನಾನು ಮಾಡಿರುವ ಆರೋಪ ಸುಳ್ಳಾಗಿದ್ದಾರೆ ಈ ಬಗ್ಗೆ ನವರಾತ್ರಿಯೊಳಗೆ ತಾಯಿ ಚಾಮುಂಡಿ ಬೆಟ್ಟದಲ್ಲಿ ಆಣೆ ಮಾಡಿ, ನಾನು ಮಾಡಿರುವ ತಪ್ಪು ಸಾಬೀತಾದಲ್ಲಿ ರಾಜಕೀಯದಿಂದ ನಿವೃತ್ತನಾಗುವೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥಗೆ ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್ ಮರು ಸವಾಲೆಸೆದರು.
ಅವರು ಇಂದು ಬೆಳಿಗ್ಗೆ ಸುದ್ಧಿ ಗೋಷ್ಠಿಯಲ್ಲಿ ಮಾತನಾಡುತ್ತಾ ವಿಶ್ವನಾಥ ಎಂಬ ಕಾರ್ಕೊಟಕ ವಿಷವನ್ನು ಪಕ್ಷಕ್ಕೆ ಕರೆತಂದು ತಪ್ಪು ಎಸಗಿರುವೆ, ಇದರಿಂದ ಪಕ್ಷಕ್ಕೆ ಮುಜುಗರವಾಗಿದ್ದು ನನ್ನ ತಪ್ಪಿನ ಅರಿವಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಯಾರು ಹಳ್ಳಿ ಹಕ್ಕಿ ಎಂದ್ರು ಹೆಸರಿಟ್ಟರೋ, ಬೇಸಿಗೆಗೊಂದು. ಮಳೆಗಾಲ- ಚಳಿಗಾಲಕ್ಕೊಂದು ಗೂಡು ಹುಡುಕುತ್ತಾ ಯಾರಿಗೂ ನಿಷ್ಠರಾಗಲಿಲ್ಲ ಎಂದು ಲೇವಡಿ ಮಾಡಿದರು.
ಬ್ಲೂ ಬಾಯಿ ಯಾರು :
ಕಳೆದೆರಡು ತಿಂಗಳಿನಿಂದ ತಮ್ಮ ರಾಸಲೀಲೆ ಸಿಡಿ ಹರಿದಾಡುತ್ತಿದ್ದು. 70ನೇ ವಯಸ್ಸಿನಲ್ಲಿ ಇಂತಹ ಹೀನ ಕೃತ್ಯ ಮಾಡಿರುವ ತಾವು ಬ್ಲೂ ಬಾಯೋ? ನಾನೋ? ಎಂದು ಪ್ರಶ್ನಿಸಿ, ತಮ್ಮ ಕಲ್ಯಾಣ ಕಾರ್ಯಗಳ ಬಗ್ಗೆ ಹಂತ ಹಂತವಾಗಿ ಎಪಿಸೋಡ್ ಮೂಲಕ ಬಿಡುಗಡೆಗೊಳಿಸುವೆ ಎಂದು ಎಚ್ಚರಿಕೆ ನೀಡಿದರು.
ಕೊಚ್ಚೆಗುಂಡಿ ನಾನೋ? ತಾವೋ? ಈ ಬಗ್ಗೆ ಪ್ರಮಾಣೀಕರಿಸುವ ಮೂಲಕ ಇತ್ಯಾರ್ಥವಾಗಬೇಕಿದ್ದು, ನವರಾತ್ರಿ ಸಂದರ್ಭದಲ್ಲಿ ನಾನು ಉಪವಾಸ ವ್ರತ ಕೈಗೊಳ್ಳುವೆ, ತಮಗೆ ಸ್ವಾಭಿಮಾನ ಮನಸಾಕ್ಷಿ ಇದ್ದರೆ ಈ ಒಂಬತ್ತು ದಿನಗಳಲ್ಲಿಯೇ ಪ್ರಮಾಣ ಮಾಡಿ ಇತ್ಯರ್ಥಗೊಳಿಸಿ ಎಂದು ಒತ್ತಾಯಿಸಿದರು.
ಸುದ್ಧಿ ಗೋಷ್ಠಿಯಲ್ಲಿ ಮಾಜಿ ಮೇಯರ್ ಎಂ.ಜೆ. ರವಿ, ಜೆಡಿಎಸ್ ಮುಖಂಡ ಚಲುವೇಗೌಡ, ಪಕ್ಷದ ವಕ್ತಾರ ರವಿ ಚಂದ್ರೇಗೌಡ ಹಾಜರಿದ್ದರು.

Leave a Comment