ಆರೋಪ ಸತ್ಯಕ್ಕೆ ದೂರ-ನೇಮಕಾತಿ ಆದೇಶಕ್ಕೆ ಮನವಿ

ರಾಯಚೂರು.ಜ.31- ತಾಲೂಕಿನ ಕಮಲಾಪೂರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ತಾತ್ಕಾಲಿಕ ಆಯ್ಕೆ ರದ್ದುಗೊಳಿಸಬೇಕೆಂದು ಆರೋಪಿಸಿರುವ ನರಸಿಂಹಲು ಅವರು ಆರೋಪ ಸತ್ಯಕ್ಕೆ ದೂರವಾಗಿದೆಂದು ಗ್ರಾಮಸ್ಥ ಎಂ.ಪಿ.ರೆಡ್ಡಿ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಕಮಲಾಪೂರು ಗ್ರಾಮದ ಅಂಗನವಾಡಿ ಕೇಂದ್ರ-2 ಹುದ್ದೆಗೆ ನಗ್ಮಾ ತಂದೆ ಕಂಡೆಪ್ಪ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಿಯಮನುಸಾರ ಆಯ್ಕೆಯಾಗಿದ್ದಾರೆ. ನಗ್ಮಾ 10 ನೇ ತರಗತಿಯಲ್ಲಿ ಶೇ.70.56, ಅಂಕಗಳಿಸಿದ್ದು, ಜ್ಯೇಷ್ಠತ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ನರಸಿಂಹ ಅವರ ಪತ್ನಿ 10 ನೇ ತರಗತಿಯಲ್ಲಿ ಶೇ.59.84 ಅಂಕಗಳಿಸಿದ್ದಾರೆಂದು ತಿಳಿಸಿದರು.
ಮಹೇಶ ನಾಯಕ ಹಾಗೂ ನರಸಿಂಹಲು ಅವರು ಅನಾವ್ಯಶಕವಾಗಿ ಗೊಂದಲ ಸೃಷ್ಠಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಂಬಂಧಪಟ್ಟ ಇಲಾಖೆಯು ಸೂಕ್ತವಾಗಿ ತನಿಖೆ ಮಾಡಬಹುದು ಅಂಗನವಾಡಿ ಕಾರ್ಯಕರ್ತೆಗೆ ಅರ್ಹರಾದ ನಗ್ಮಾ ಅವರನ್ನು ನೇಮಕಾತಿ ಪರಿಗಣಿಸಿ ಅಧಿಕಾರಿಗಳು ಆದೇಶ ನೀಡಲು ಮುಂದಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉರುಕುಂದ ನಾಯಕ, ರಾಜಪ್ಪ ವಕೀಲರು, ಹನುಮಂತ ನಾಯಕ, ಭೀಮಸೇನ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment