ಆರೋಪಿಗೆ ಗಲ್ಲು ಶಿಕ್ಷೆಗೆ ಒತ್ತಾಯ

ರಾಯಚೂರು.ನ.22- ಹಾಲಿ ಶಾಸಕರಾದ ತನ್ವೀರ್ ಸೇಠ ಮೇಲೆ ಹಲ್ಲೆ ಖಂಡನೀಯವಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನ ಸಂಚಾಲಕ ಪರಶುರಾಮ ಅರೋಲಿ ಒತ್ತಾಯಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಆರೋಪಿ ಫರಾನ್ ಪಾಷಾ ಶಾಸಕರ ಮೇಲೆ ಏಕಾಏಕಿ ಮಾರಣಂತಿಕ ಹಲ್ಲೆ ಮಾಡಿದ್ದಾನೆ. ಮಚ್ಚುನಿಂದ ಕುತ್ತಿಗೆ ಭಾಗಕ್ಕೆ ಬಲವಾದ ಏಟು ಬಿದ್ದಿರುವುದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ಅಥವಾ ಜೀವವಧಿ ಶಿಕ್ಷೆ ವಿಧಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು ಯಾವುದೇ ಕಾರಣಕ್ಕೂ ಆರೋಪಿಯು ಕಾನೂನುನಿಂದ ತಪ್ಪಿಸಿಕೊಳ್ಳಬಾರದೆಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಸರ್ಕಾರದಲ್ಲಿ ದಲಿತ, ಅಲ್ಪ ಸಂಖ್ಯಾತರ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಶಾಸಕರ ಮೇಲೆ ನಡೆದ ಘಟನೆಯು ಭಯದ ವಾತಾವರಣ ಸೃಷ್ಟಿ ಮಾಡುವ ಕೃತ್ಯವಾಗಿದೆ. ಸಮಾಜದ ಕನಸು ಕಾಣದ ಬುದ್ದಿ ಜೀವಿಗಳು ಅತಿ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು ಈ ಘಟನೆಯನ್ನು ಒಗ್ಗಟಾಗಿ ಎಲ್ಲಾರು ವಿರೋಧಿಸಬೇಕೆಂದು ತಿಳಿಸಿದರು.
ತನ್ವೀರ್ ಸೇಠ್ ಅವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಪೊಲೀಸ್ ಇಲಾಖೆಯು ವಿಶೇಷವಾಗಿ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನರಸಿಂಹಲು ಗಧಾರ, ಪರಶುರಾಮ ಅರೋಲಿ, ರಾಜು ಗಧಾರ, ಇಮಾನುವೇಲ್, ರವಿ ಗಧಾರ, ನರೇಶ, ಸತೀಶ, ಪರಮೇಶ ಗಬ್ಬೂರು,ಟಿ. ಮೋಹನ್ ಜಾನಪೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment