ಆರೋಗ್ಯ ಸ್ನೇಹಿ ಹಾಗಲ

ಹಾಗಲಕಾಯಿಯ ಹೆಸರು ಕೇಳಿದರೆ ಮುಖ ತಿರುಗಿಸುವವರೇ ಜಾಸ್ತಿ. ಇದರಲ್ಲಿರುವ ಕಹಿ ಅಂಶವನ್ನು ನೆನಪಿಸಿಕೊಂಡೇ ಹಲವರು ಹಾಗಲಕಾಯಿಯ ಸೇವನೆಗೆ ಮುಂದಾಗುವುದಿಲ್ಲ.

ಉಸಿರಾಟದ ಸಮಸ್ಯೆ:
ಹಾಗಲಕಾಯಿ ಬೀಜಗಳು ಉಸಿರಾಟದ ಸಮಸ್ಯೆಗಳಾದ ಅಸ್ತಮಾ, ನೆಗಡಿ, ಕೆಮ್ಮು ಇಂತಹ ಉಸಿರಾಟದ ಸಮಸ್ಯೆಗಳಿಗೆ ಉತ್ತಮ ಪರಿಹಾರ. ಜೊತೆಗೆ ಹಾಗಲಕಾಯಿ ಎಲೆಯನ್ನು ತುಳಸಿ ಎಲೆಯ ಜೊತೆ ಸೇರಿಸಿ ಪೇಸ್ಟ್ ಮಾಡಿ ಜೇನುತುಪ್ಪದ ಜೊತೆ ಬೆಳಿಗ್ಗೆ ಸೇವಿಸುವುದರಿಂದ ಹಲವಾರು ರೀತಿಯ ಉಸಿರಾಟ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು.
ಲೀವರ್ ಟಾನಿಕ್:
ಅಪೌಷ್ಟಿಕ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು, ಈ ಕಾರಣಗಳಿಂದಾಗಿ ಲೀವರ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಾಗಲಕಾಯಿ ಉತ್ತಮ ಪರಿಹಾರ. ಪ್ರತಿನಿತ್ಯ ಒಂದು ಲೋಟ ಕಹಿ ಹಾಗಲಕಾಯಿಯ ಜ್ಯೂಸ್ ಕುಡಿಯುವುದರಿಂದ ಕಹಿ ಎನಿಸಿದರು ಲೀವರ್ ಸಮಸ್ಯೆಗಳು ದೂರವಾಗುತ್ತವೆ.

ರೋಗ ನಿರೋಧಕ ವ್ಯವಸ್ಥೆ:
ಕಹಿ ಹಾಗಲಕಾಯಿಯ ಎಲೆಯನ್ನು ನೀರಿನಲ್ಲಿ ಕುದಿಸಿ ಸೇವಿಸುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಉತ್ತಮವಾಗುತ್ತದೆ. ಇದರಿಂದ ದೇಹಕ್ಕೆ ರೋಗಾಣುಗಳ ವಿರುದ್ಧ ಹೋರಾಡಲು ಶಕ್ತಿ ಸಿಗುತ್ತದೆ.

ಮೊಡವೆಗಳಿಗೆ ಉತ್ತಮ ಪರಿಹಾರ:
ಹಾಗಲಕಾಯಿಯ ಸೇವನೆಯಿಂದ ಮೊಡವೆ, ಕಲೆಗಳು ಹಾಗೇ ತೀವ್ರವಾದ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಬಹುದು. ಹಾಗಲಕಾಯಿ ರಕ್ತದ ಸಮ್ಯೆಯಿಂದ ಉಂಟಾಗುವ ಕಜ್ಜಿ ತುರಿಕೆ, ಸೋರಿಯಾಸಿಸ್, ಫಂಗಲ್ ಸಮಸ್ಯೆಗೆ ಉತ್ತಮ ಪರಿಹಾರ. ಜೊತೆಗೆ ಇದು ಆಂಟಿ ಏಜಿಂಗ್ ಆಗಿ ಕೆಲಸ ಮಾಡುತ್ತದೆ. ಹಾಗಲಕಾಯಿ ಜ್ಯೂಸ್ಗೆ ಸ್ವಲ್ಪ ನಿಂಬೆ ರಸ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬನ್ನಿ.

ಸಕ್ಕರೆ ಕಾಯಿಲೆಗೆ ಉತ್ತಮ:
ಸಕ್ಕರೆ ಕಾಯಿಲೆ ಸಮಸ್ಯೆಗೆ ಹಿಂದಿನ ಕಾಲದಿಂದಲೂ ಹಾಗಲಕಾಯಿಯನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಎ ಮ್.ಪಿ ಸಕ್ರಿಯ ಪ್ರೋಟೀನ್ ಕೈನೀಸ್ ಎಂಬ ಸೆಲ್ಸ್ನಲ್ಲಿರುವ ಆಂಶ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ಬಾರಿ ಇನ್ಸುಲಿನ್ನ ವ್ಯತ್ಯಯದಿಂದ ಈ ಸೆಲ್ಸ್ಗಳು ಸಕ್ಕರೆಯನ್ನು ಹೀರಿಕೊಳ್ಳಲಾರವು ಆಗ ಟೈಪ್ ೨ ಡಯಾಬಿಟಿಸ್ ಆರಂಭವಾಗುತ್ತದೆ. ಹಾಗಲಕಾಯಿ ಇಂತಹ ಸೆಲ್ಸ್ಗಳನ್ನು ಸಕ್ರಿಯಗೊಳಿಸಿ ಡಯಾಬಿಟಿಸ್ನ್ನು ನಿಯಂತ್ರಿಸುತ್ತದೆ. ಹಾಗಲಕಾಯಿಯಲ್ಲಿರುವ ಕೆಲವು ಅಂಶಗಳು ಇನ್ಸುಲಿನ್ ತರಹ ಕೆಲಸ ಮಾಡುತ್ತದೆ.

ಮಲಬದ್ಧತೆ ಸಮಸ್ಯೆ:
ಹಾಗಲಕಾಯಿಯಲ್ಲಿ ಫೈಬರ್ ಅಂಶ ಸಮೃದ್ಧವಾಗಿರುವುದರಿಂದ ಇದು ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಇದರಿಂದ ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆ ಗುಣವಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆ:
ಹೃದಯಕ್ಕೆ ಹಾಗಲಕಾಯಿ ಹಲವಾರು ರೀತಿಯಲ್ಲಿ ಸಹಾಯಕವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್‌ಗಳು ಅಪಧಮನಿಗಳಲ್ಲಿ ಶೇಖರಣೆಯಾಗುವುದನ್ನು ತಪ್ಪಿಸಿ ಹೃದಯಾಘಾತದ ಸಂಭವವನ್ನು ಕಡಿಮೆಮಾಡುತ್ತದೆ.

Leave a Comment