ಆರೋಗ್ಯ ವೃದ್ಧಿಗೆ ಎಳನೀರು

ಬೇಸಿಗೆಯಲ್ಲಿ ಅತಿಯಾದ ದಾಹ ತಣಿಸಲು ಬಳಸಲ್ಪಡುವಂತಹ ಪಾನೀಯಗಳಲ್ಲಿ ಎಳನೀರು ಕೂಡ ಒಂದು. ಇಂದು ರಸ್ತೆ ಬದಿಯಲ್ಲಿ ಎಲ್ಲೇ ನೋಡಿದರೂ ಎಳನೀರಿನ ಗಾಡಿ ನಿಮಗೆ ಸಿಕ್ಕೇ ಸಿಗುತ್ತದೆ. ಎಳನೀರನ್ನು ಕುಡಿದರೆ ನಮ್ಮ ದೇಹಕ್ಕೆ ಬೇಕಾಗುವಂತಹ ಹಲವಾರು ರೀತಿಯ ಪೋಷಕಾಂಶಗಳು ಸಿಗುವುದು.

ಎಳನೀರನ್ನು ಪ್ರತಿಯೊಬ್ಬರು ಬಳಸಿಕೊಳ್ಳಬಹುದು. ಪ್ರತಿದಿನ ಒಂದು ವಾರ ಕಾಲ ಎಳನೀರು ಕುಡಿದರೆ ನಿಮ್ಮ ದೇಹವು ಅದ್ಭುತವಾಗಿ ಬದಲಾವಣೆಗಳನ್ನು ಕಾಣುವುದು. ಚರ್ಮವು ತುಂಬಾ ನಯ, ಯೌವನಯುತ, ಶಕ್ತಿಯುತ ಹಾಗೂ ಫಿಟ್ನೆಸ್ ಹೊಂದಿರುವ ದೇಹವು ನಿಮ್ಮದಾಗುವುದು.

ಎಳನೀರನ್ನು ಹೆಚ್ಚಾಗಿ ಪ್ರತಿಯೊಬ್ಬರು ಇಷ್ಟಪಡುವರು. ಇದು ರುಚಿಕರವಾಗಿರುವುದ ಮಾತ್ರವಲ್ಲದೆ, ಹಲವಾರು ರೀತಿಯ ಪೋಷಕಾಂಶಗಳು ಇದರಿಂದ ದೇಹಕ್ಕೆ ಲಭ್ಯವಾಗುವುದು.

ಒಂದು ವಾರ ಕಾಲ ಎಳನೀರನ್ನು ಕುಡಿದರೆ ಅದರಿಂದ ಆರೋಗ್ಯವು ತುಂಬಾ ಸುಧಾರಣೆಯಾಗುವುದು. ಇದರಿಂದ ನಿಮಗೆ ತೂಕ ಇಳಿಸಲು ಸಾಧ್ಯವಾಗುವುದು, ಜೀರ್ಣಕ್ರಿಯೆಗೆ ಇದು ಸಹಕಾರಿ, ಶಕ್ತಿ ವರ್ಧಿಸುವುದು ಮತ್ತು ಚರ್ಮಕ್ಕೆ ಇದು ಪುರ್ನರ್ಶ್ಚೇತನ ನೀಡುವುದು. ಪ್ರತಿರೋಧಕ ವ್ಯವಸ್ಥೆ ಸುಧಾರಣೆ ಮಾಡುವುದು ಪ್ರತಿನಿತ್ಯವು ಎಳನೀರಿನ ಸೇವನೆ ಮಾಡಿದರೆ ಅದರಿಂದ ದೇಹದ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು ಎಂದು ಹೇಳಲಾಗುತ್ತದೆ.

coconut-water-good

ಈ ಪಾನೀಯವು ದೇಹದಲ್ಲಿ ಒಸಡಿನ ಸಮಸ್ಯೆ ಮತ್ತು ಮೂತ್ರನಾಳದಲ್ಲಿ ಸೋಂಕು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ದೇಹದಿಂದ ಹೊರಗೆ ಹಾಕುವುದು. ಅದೇ ರೀತಿಯಾಗಿ ಶೀತ, ಟೈಫಸ್ ಮತ್ತು ಇತರ ಕೆಲವು ಸೋಂಕಿನ ಕಾಯಿಲೆಗಳನ್ನು ಇದು ನಿವಾರಣೆ ಮಾಡುವುದು. ಚಳಿಗಾಲದಲ್ಲೂ ಕೂಡ ನೀವು ಎಳನೀರು ಕುಡಿದರೆ ಅದರಿಂದ ಆರೋಗ್ಯವು ಬಲ ಗೊಳ್ಳುವುದು. ಶಕ್ತಿ ವೃದ್ಧಿ ಮಾಡುವುದು ಎಳನೀರಿನಲ್ಲಿ ಥೈರಾಯ್ಡ್ ಹಾರ್ಮೋನು ಇದೆ. ಇದರಿಂದ ಕೋಶಗಳ ಮಟ್ಟದಲ್ಲಿ ಇದು ಶಕ್ತಿ ಹೆಚ್ಚು ಮಾಡುವುದು. ಒಂದು ವಾರಗಳ ಕಾಲ ದಿನಿತ್ಯ ಎಳನೀರು ಕುಡಿದರೆ, ಆತ ನಿಮಗೆ ತುಂಬಾ ಆರಾಮ, ಸ್ಪೂರ್ತಿ, ಚೆನ್ನಾಗಿ ತಿನ್ನುವ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದು.

ಕಿಡ್ನಿಗೆ ತುಂಬಾ ಒಳ್ಳೆಯದು ಎಳನೀರು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕಲು ತುಂಬಾ ನೆರವಾಗುವುದು ಮತ್ತು ಕಿಡ್ನಿ ಕಲ್ಲನ್ನು ತೆಗೆಯುವುದು. ಇದು ನೈಸರ್ಗಿಕ ಮೂತ್ರವರ್ಧಕವಾಗಿರುವ ಕಾರಣದಿಂದಾಗಿ ಮೂತ್ರಕೋಶವನ್ನು ಇದು ಶುದ್ಧೀಕರಿಸುವುದು, ಮೂತ್ರನಾಳದ ರಕ್ಷಣೆ ಮಾಡುವುದು ಮತ್ತು ಕಿಡ್ನಿಗೆ ಕಾಯಿಲೆಗಳು ಬರದಂತೆ ಇದು ತಡೆಯುವದು. ಕಿಡ್ನಿ ಸಮಸ್ಯೆ ಇರುವಂತಹ ವ್ಯಕ್ತಿಗಳು ಪ್ರತಿನಿತ್ಯ ಎಳನೀರನ್ನು ಒಂದು ವಾರ ಕಾಲ ಕುಡಿದರೆ ಅದರಿಂದ ಕಾಯಿಲೆಯು ಪರಿಣಾಮಕಾರಿಯಾಗಿ ಕಡಿಮೆ ಆಗುವುದು

ಜೀರ್ಣಕ್ರಿಯೆ ಸುಧಾರಿಸುವುದು ಎಳನೀರು ನಿಮಗೆ ತುಂಬಾ ಒಳ್ಳೆಯದು ಯಾಕೆಂದರೆ ಇದರಲ್ಲಿ ಉತ್ತಮ ಮಟ್ಟದ ನಾರಿನಾಂಶವಿದೆ. ಇದು ಹೊಟ್ಟೆಯಲ್ಲಿ ಆಮ್ಲವನ್ನು ತಟಸ್ಥಗೊಳಿಸಿ, ಆಹಾರವು ತುಂಬಾ ಸುಲಭವಾಗಿ ಜೀರ್ಣವಾಗಲು ನೆರವಾಗುವುದು. ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗುವ ಕಾರಣದಿಂದಾಗಿ ದೇಹವು ಹೆಚ್ಚಿನ ಶಕ್ತಿ ಪಡೆಯುವುದು ಮತ್ತು ಜೀರ್ಣಕ್ರಿಯೆ ಸಮಸ್ಯೆಯನ್ನು ತುಂಬಾ ಕಡಿಮೆ ಮಾಡುವುದು.

ತಲೆನೋವು ಕಾಡುತ್ತಲಿದ್ದರೆ ಆಗ ಎಳನೀರು ನಿಮಗೆ ನೈಸರ್ಗಿಕ, ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಇದನ್ನು ನೀವು ಕಡೆಗಣಿಸಬಾರದು. ನಿರ್ಜಲೀಕರಣದಿಂದಾಗಿ ರಕ್ತದೊತ್ತಡ ಮತ್ತು ತಲೆನೋವು ಕಾಡುವುದು. ಎಳನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶವು ಹೆಚ್ಚಾಗುವುದು. ಇದರಿಂದ ದೇಹವು ಆರಾಮ ಪಡೆಯುವುದು ಮತ್ತು ತಲೆ ನೋವನ್ನು ತುಂಬಾ ಶೀಘ್ರವಾಗಿ ನಿವಾರಣೆ ಮಾಡಲು ಇದು ನೆರವಾಗುವುದು.

ಪ್ರತಿನಿತ್ಯ ಎಳನೀರು ಕುಡಿದರೆ ಅದರಿಂದ ಹೃದಯಾಘಾತ ಪಾರ್ಶ್ವವಾಯುವಿನ ಅಪಾಯ ಕಡಿಮೆ ಆಗುವುದು ಮತ್ತು ವಯಸ್ಸಾಗುವ ಲಕ್ಷಣಗಳು ನಿಧಾನವಾಗುವುದು. ಯೌವನವು ಮರಳಿ ಬರುವುದು ಎಳನೀರಿನಲ್ಲಿ ಇರುವಂತಹ ಕೆಲವೊಂದು ಅಂಶಗಳು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ, ಇದು ದೇಹವು ಹೆಚ್ಚಿನ ಶಕ್ತಿ ಪಡೆಯುವುದು. ಇದರೊಂದಿಗೆ ಚರ್ಮಕ್ಕೆ ಕಾಂತಿ ಕೂಡ ಸಿಗುವ ಕಾರಣದಿಂದಾಗಿ ನೀವು ತುಂಬಾ ಯೌವನಯುವಾಗಿ ಕಾಣುವಿರಿ. ನೆರಿಗೆ, ಚರ್ಮ ಜೋತು ಬೀಳುವ ಸಮಸ್ಯೆಯು ಕಡಿಮೆ ಆಗುವುದು.

Leave a Comment