ಆರೋಗ್ಯ ಕರ್ನಾಟಕ : ಕಡ್ಡಾಯ ನೋಂದಣಿಗೆ ಕರೆ

ರಾಯಚೂರು.ಆ.7- ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೊಂದಾಯಿತ ಫಲಾನುಭವಿಗಳು ಆರೋಗ್ಯ ಕರ್ನಾಟಕ ಯೋಜನೆಯಡಿ ಕಡ್ಡಾಯ ನೋಂದಣಿ ಮಾಡಿಕೊಳ್ಳುವ ಮೂಲಕ ಯೋಜನೆ ಸದುಪಯೋಗ ಪಡೆದುಕೊಳುವಂತೆ ಸಹಕಾರ ಸಂಘ ಇಲಾಖೆಗಳ ಉಪ ನಿಬಂಧಕರಾದ ಡಾ.ಸುನಿತಾ ಸಿದ್ದರಾಮ ಕರೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರಿ ಮಂಡಳಿ ಜಿಲ್ಲಾ ಸಹಕಾರ ಯುನಿಯನ್ ಸಹಕಾರ ಇಲಾಖೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಜಂಟಿ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಭಾರತ ವೈದ್ಯಕೀಯ ಸಂಘ ಸಭಾಂಗಣದಲ್ಲಿ ನೂತನ ಆರೋಗ್ಯ ಕರ್ನಾಟಕ ಯೋಜನೆ ಕುರಿತು ಸಹಕಾರಿ ಸಂಘ ಮುಖ್ಯ ಕಾರ್ಯನಿರ್ವಾಹಕರಿಗೆ ಹಮ್ಮಿಕೊಂಡ ವಿಶೇಷ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ರಾಜ್ಯ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಆರೋಗ್ಯ ಕರ್ನಾಟಕ ಯೋಜನೆಯಡಿ ಮಹತ್ವಕಾಂಕ್ಷಿ ಯಶಸ್ವಿನಿ ಯೋಜನೆ ಈಗಾಗಲೆ ವಿಲೀನಗೊಳಿಸಲಾಗಿದ್ದು, ಸಹಕಾರ ಸಂಘಗಳಲ್ಲಿ ನೋಂದಾಯಿಸಿಕೊಂಡ ಸದಸ್ಯರ ಪೈಕಿ ಪ್ರತಿ ಕುಟುಂಬ ವತಿಯಿಂದ ತಲಾ ಮೂವರು ಸದಸ್ಯರಿಗೆ ವಂತಿಕೆ ಪ್ರಗತಿ ಸಾಧಿಸಲಾಗುತ್ತಿದೆ. ಸಹಕಾರಿ ಸಂಘಗಗಳಲ್ಲಿ ನೋಂದಾಯಿಸಿಕೊಂಡ ಸದಸ್ಯರ ಆರೋಗ್ಯವೃದ್ಧಿಗೆ ಆರೋಗ್ಯ ಕರ್ನಾಟಕ ಯೋಜನೆ ಸಹಕಾರಿಯಾಗಲಿದ್ದು, ಪ್ರತಿಯೊಬ್ಬ ಫಲಾನುಭವಿ ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕು.
1514 ಶಸ್ತ್ರ ಚಿಕಿತ್ಸೆ, 757 ಸರ್ಕಾರಿ, ಖಾಸಗಿ ನೆಟ್ ವರ್ಕ್ ಹೊಂದಿರುವ ನಗರದಲ್ಲಿ 11 ಸರ್ಕಾರಿ ಆಸ್ಪತ್ರೆ ಹಾಗೂ 3 ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಕರ್ನಾಟಕ ಯೋಜನೆ ನೋಂದಣಿಗೆ ಪ್ರಾಥಮಿಕ ಹಂತವಾಗಿ ಅವಕಾಶ ಕಲ್ಪಿಸಲಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೋಂದಾಯಿಸಿಕೊಂಡ ಬಿಪಿಎಲ್ ಪಡಿತರದಾರರು ಸದರಿ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ರೈತರ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗುವ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ತಮಗೆ ವಹಿಸಿರುವ ಜವಾಬ್ದಾರಿ ಅಚ್ಚುಕಟ್ಟು ನಿರ್ವಹಿಸುವಂತೆ ಸಲಹೆ ನೀಡಿದರು.
ಆರ್‌ಡಿಸಿಸಿ ಅಪರ ನಿಬಂಧಕರಾದ ಅರಳಿ ಸೂರ್ಯಕಾಂತ, ಆರ್‌ಡಿಸಿಸಿ ನಿರ್ದೇಶಕರಾದ ವಿಶ್ವನಾಥ ಪಾಟೀಲ್, ಜಿ.ವಿಜಯಕುಮಾರ ಪಾಟೀಲ್, ಕಲ್ಲಯ್ಯ ಸ್ವಾಮಿ, ಡಾ.ವಿಜಯಶಂಕರ, ಎಸ್.ಎಸ್. ಪಾಟೀಲ್, ರಾಜಶೇಖರ, ಡಾ.ನಂದಿತಾ ಉಪಸ್ಥಿತರಿದ್ದರು.

Leave a Comment