ಆರೋಗ್ಯಕ್ಕೆ ಸಿರಿಧಾನ್ಯ ಸಹಕಾರಿ : ಸದಾಶಿವ

ದಾವಣಗೆರೆ,ನ,6 : ಸಿರಿಧಾನ್ಯ ಆಹಾರ ಪದ್ದತಿ ಆಳವಡಿಸಿಕೊಂಡರೆ ರೋಗಗಳಿಂದ ಮುಕ್ತರಾಗಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿನಿರ್ದೇಶಕ ವಿ.ಸದಾಶಿವ ಹೇಳಿದರು. ತಾಲ್ಲೂಕು ಬಿ.ಕಲಪನಹಳ್ಳಿ ಗ್ರಾಮದಲ್ಲಿ ರೈತ ಲೋಹಿತ್ ಜಮೀನಿನಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆ ಇದೆ. ಸಿರಿಧಾನ್ಯ ಬಳಕೆಯಿಂದ ಗ್ಯಾಂಗ್ರಿನ್ , ಸಕ್ಕರೆ ಕಾಯಿಲೆ, ಕ್ಯಾನ್ಸರ್‍ನಂತಹ ಮಾರಕ ರೋಗಗಳು ಸಹ ವಾಸಿಯಾಗಿರುವ ನಿದರ್ಶನಗಳು ನಮ್ಮ ಮುಂದೆ ಇವೆ. ಇಲ್ಲಿನ ರೈತರು ಭತ್ತವನ್ನು ಮುಖ್ಯ ಬೆಳಯನ್ನಾಗಿಸಿಕೊಂಡು ಎರಡು ಅವಧಿಯಲ್ಲಿ ನೀರಿಲ್ಲದೇ ಬೆಳೆ ಇಲ್ಲದೇ ಕಂಗಾಲಗಿದ್ದರು. ಅದರೆ ಈಗ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ರಾಗಿ ಎಂಬ ಸಿರಿಧಾನ್ಯ. ಅತೀ ಕಡಿಮೆ ನೀರಿನಲ್ಲೂ ಬೆಳಯಬಹುದಾದಗಿದೆ. ಕಳೆದ ವರ್ಷ ಈ ಗ್ರಾಮದಲ್ಲಿ ರೈತರು ರಾಗಿಯನ್ನು ಬೆಳೆದಿರಲಿಲ್ಲ. ಅದರೆ ಈ ವರ್ಷ 50 ರಿಂದ 100 ಎಕರೆ ಪ್ರದೇಶದಲ್ಲಿ ಈ ಬೆಳಯನ್ನು ಬೆಳೆದಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ ಒಟ್ಟು 2000 ಎಕರೆ ಸಿರಿಧಾನ್ಯಗಳ ಬಿತ್ತನೆಯಾಗಿದೆ ಎಂದು ಹೇಳಿದರು. ಸಹಾಯಕ ಕೃಷಿನಿರ್ದೇಶಕ ಬಿ.ಉಮೇಶ್ ಸಿರಿಧಾನ್ಯಗಳ ಆಹಾರ ಪದ್ದತಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಅಧ್ಯಕ್ಷತೆಯನ್ನು ಶ್ರೀ ಆಂಜನೇಯ ಸಾವಯುವ ಕೃಷಿಕರ ಬಳಗದ ಅಧ್ಯಕ್ಷ ಯು.ಕೆ.ಚಂದ್ರಶೇಖರಪ್ಪ ವಹಿಸಿದ್ದರು. ಒಕ್ಕೂಟದ ನಿರ್ದೇಶಕ ಪರಮೇಶ್.ವಿ.ಎನ್ ಸ್ವಾಗತಿಸಿದರು. ಎಮ್.ಬಿ.ನಾಗರಾಜ್, ಸೋಮಶೇಖರಪ್ಪ, ಕೆ.ಜಿ.ಉಜ್ಜಪ್ಪ ಗ್ರಾಮ ಪಂಚಾಯಿತಿ ಸದಸ್ಯರು, ಕೆ.ಬಿ.ಬಸವಲಿಂಗಪ್ಪ, ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್‍ಗೌಡ ಪಾಟೀಲ್ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment