ಆರೋಗ್ಯಕರ ಭಾರತಕ್ಕೆ ಕೈಜೋಡಿಸಿದ ಕರೀನಾ

ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಮತ್ತು ಪ್ರತಿರಕ್ಷಣಾ ಅಭಿಯಾನ ’ಸ್ವಾಸ್ಥ್ ಇಮ್ಯೂನೈಸ್ಡ್ ಇಂಡಿಯಾ’ ದ ಪ್ರಚಾರ ರಾಯಭಾರಿಯಾಗಿ ಖ್ಯಾತ ನಟಿ ಕರೀನಾ ಕಪೂರ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ. ನೆಟ್ವರ್ಕ್೧೮ ಸಹಯೋಗದೊಂದಿಗೆ ಪ್ರಪಂಚದ ಅತಿದೊಡ್ಡ ಲಸಿಕೆ ತಯಾರಕರ ಪೈಕಿ ಒಂದಾದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಾರಂಭಿಸಿರುವ ಈ ಅಭಿಯಾನವು ಆರೋಗ್ಯಕರ ಭಾರತ ನಿರ್ಮಾಣಕ್ಕೆ ಬಾಲ್ಯದಲ್ಲೆ ರೋಗನಿರೋಧತೆಯ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ಒಂದು ದೃಢವಾದ ಜಾಲವನ್ನು ನಿರ್ಮಿಸುವತ್ತ ಗಮನಹರಿಸುತ್ತದೆ.

ಆರೋಗ್ಯಕರ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್  ದೇಶದ್ಯಾದಂತ ಸೆರಮ್ ಇನ್ಸ್ಟಿಟ್ಯೂಟ್ ಆಫ್
ಇಂಡಿಯಾ ಆಯೋಜಿಸಿರುವ ’ಸ್ವಾಸ್ಥ್ ಇಮ್ಯೂನೈಸ್ಡ್ ಇಂಡಿಯಾ’ ಅಭಿಯಾನಕ್ಕೆ ಕೈಜೋಡಿಸಿ ರೋಗ ನಿರೋಧತೆಯ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.

vaividya-kareena-kapoor-khan1-clrಅಭಿಯಾನದ ಬಗ್ಗೆ ಮಾತನಾಡಿದ ಕರೀನಾ ಕಪೂರ್ ಖಾನ್, “ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾವು ಕುಟುಂಬಕ್ಕೆ ಲಸಿಕೆಯ ಮಹತ್ವವನ್ನು ತಿಳಿಸುತ್ತದೆ. ಇದು ಮಕ್ಕಳಿಗೆ ಆರೋಗ್ಯಕರ ಜೀವನವನ್ನು ಒದಗಿಸುವ ಅತ್ಯುತ್ತಮ ಪ್ರಯತ್ನವಾಗಿದೆ. ಓರ್ವ ತಾಯಿಯಾಗಿ ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ನನ್ನ ಮಗುವನ್ನು ಅಪಾಯಕಾರಿ ರೋಗಗಳಿಂದ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹಲವಾರು ಕೊರತೆಯಿಂದ ನಮ್ಮ ದೇಶದಲ್ಲಿ  ಹೆಚ್ಚಿನ ಸಂಖ್ಯೆಯ ಶಿಶು ಸಾವು ಸಂಭವಿಸುತ್ತವೆ. ನಾವೆಲ್ಲರೂ ಬದಲಾವಣೆಗಾಗಿ ಒಂದಾಗಬೇಕು.

ಈ ಕೆಲಸದಲ್ಲಿ ಕೈ ಜೋಡಿಸಲು ನಾನು ಉತ್ಸುಕಳಾಗಿದ್ದೇನೆ. ಅದಾರ್ ಮತ್ತು ನತಾಶಾ ಪೂನವಾಲ್ಲರ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ನೆಟ್ವರ್ಕ್ ೧೮ ರೊಂದಿಗೆ ಈ ಪ್ರಯಾಣದ ಒಂದು ಭಾಗವಾಗಲು ಹೆಮ್ಮೆ ಪಡುತ್ತೇನೆ. ಈ ಆಂದೋಲನದ ಮೂಲಕ ನಾವು ಆರೋಗ್ಯಪೂರ್ಣ ಭಾರತ ನಿರ್ಮಾಣದ ಪ್ರತಿಯೊಬ್ಬ ಪೋಷಕರ ಮೇಲೂ ಪ್ರಭಾವ ಬೀರಲಿದೆ” ಎಂದು ಅಭಿಪ್ರಾಯಪಟ್ಟರು.

ಸಮಾಜದ ಬಡ ವರ್ಗದ ಜನರಿಗೆ ಚುಚ್ಚುಮದ್ದಿನ ಅಗತ್ಯವನ್ನು ಕರೀನಾ ತಿಳಿಸಿ ಕೊಡಲಿದ್ದಾರೆ. ಮಾರಣಾಂತಿಕ ರೋಗಗಳನ್ನು ನಿಭಾಯಿಸಲು ವ್ಯಾಕ್ಸಿನೇಷನ್ ಹೆಚ್ಚು ಸೂಕ್ತ ವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತವು ಪೋಲಿಯೊ ಮತ್ತು ಸ್ಮಾಲ್ ಪೋಕ್ಸ್ ಗಳನ್ನು ರಾಷ್ಟ್ರವ್ಯಾಪಿಯಾಗಿ ನಿರ್ಮೂಲನೆ ಮಾಡಿದೆ. ಭವಿಷ್ಯದಲ್ಲಿ ಇತರ ರೋಗಗಳಿಗೂ ಇದು ಸಾಧ್ಯವಾಗಬೇಕು. ಭಾರತದಲ್ಲಿ ಇಂದಿಗೂ ಮಕ್ಕಳು ಮತ್ತು ತಾಯಂದಿರು ಮಾಸ್ಲೆಸ್, ಡಿಫ್ಥೇರಿಯಾ ಮುಂತಾದ ರೋಗಗಳನ್ನು ಲಸಿಕೆ ಮೂಲಕ ತಡೆಗಟ್ಟಲು ಸಹಕರಿಸುತ್ತಿಲ್ಲ. ಹೆಚ್ಚಿನ ಪ್ರಚಾರ ನೀಡಿದ್ದರೂ ಭಾರತದಲ್ಲಿ ಶೇ. ೫೬ ರಷ್ಟು ಜನ ಲಸಿಕೆಯನ್ನು ಅಪೂರ್ಣವಾಗಿ ಹಾಕಿದ್ದರೆ ೩೨ ಶೇ. ಮಂದಿ ಲಸಿಕೆಯನ್ನೇ ಹಾಕಿಸಿಲ್ಲ. ಎಂಬುದು ವಿಷಾದಕರ.

“ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾವು ಸಂಪೂರ್ಣವಾಗಿ ರೋಗನಿರೋಧಕ ಭಾರತದ ಗುರಿಯೆಡೆಗೆ ಇಡುತ್ತಿರುವ ಪ್ರಮುಖ ಹೆಜ್ಜೆಯಾಗಿದೆ. ಅಭಿಯಾನದ ಮುಖ್ಯ ಗುರಿ ನಮ್ಮ ದೇಶದಲ್ಲಿ ವ್ಯಾಕ್ಸಿನೇಷನ್ ಮತ್ತು ಪ್ರತಿರಕ್ಷಣೆಯ ಬಗ್ಗೆ ಸಂವಹನದಲ್ಲಿರುವ ಸಮಸ್ಯೆಯನ್ನು ಬಗೆಹರಿಸುವುದು. ಶಿಶುಗಳು, ಮಕ್ಕಳು ಮತ್ತು ನಿರೀಕ್ಷಿತ ತಾಯಂದಿರಿಗೆ ಅಗತ್ಯವಿರುವ ಲಸಿಕೆಗಳನ್ನು ಹಾಕಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ ಎಂದು  ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನವಲ್ಲಾ ಅವರು ತಿಳಿಸಿದ್ದಾರೆ.

Leave a Comment