ಆರೆಸ್ಸೆಸ್-ಬಿಜೆಪಿ ವಿರುದ್ಧ ಸಿಪಿಐ(ಎಂ)ನ ಸಮಾನ ವೇದಿಕೆ

ಅಗರ್ತಲ, ಅ. ೧೨- ಆರ್.ಎಸ್.ಎಸ್-ಬಿಜೆಪಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ದೇಶದಲ್ಲಿಯ ಎಲ್ಲ ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳನ್ನು ಒಂದೇ ವೇದಿಕೆ ಅಡಿಯಲ್ಲಿ ತರಲು ಸಿಪಿಎಂ ಮುಂದಾಗಿದೆ.

ಪ್ರಧಾನಿ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ, ಅಮೆರಿಕಾದ ಕಿರಿಯ ಪಾಲುದಾರನಾಗಿ ದೇಶದ ಸಮಗ್ರತೆಗೆ ಬೆದರಿಕೆ ಒಡ್ಡಿದ್ದಾರೆ. ಹಾಗೆಯೇ ದೇಶದಲ್ಲಿ ಮತೀಯ ಮತ್ತು ವಿಭಜಿತ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿರುವ ಆರ್.ಎಸ್.ಎಸ್ ಮತ್ತು ಬಿಜೆಪಿಯನ್ನು ಸೋಲಿಸಲು ರಾಷ್ಟ್ರಮಟ್ಟದಲ್ಲಿ ಎಲ್ಲ ಜಾತ್ಯಾತೀತ ಮತ್ತು ಪ್ರಜಾತಾಂತ್ರಿಕ ಪಕ್ಷ ಸಂಘಟನೆಗಳು ಒಂದಾಗುವುದು ಅನಿವಾರ್ಯವಾಗಿದ್ದು, ಅದನ್ನು ಒಂದೇ ವೇದಿಕೆಯಲ್ಲಿ ತರಲು ಅಂತಹ ವೇದಿಕೆಯನ್ನು ಸಿಪಿಎಂ ನಿರ್ಮಾಣ ಮಾಡುತ್ತದೆ ಎಂದು ಸಿಪಿಎಂನ ಉನ್ನತ ನಾಯಕ ಪ್ರಕಾಶ್ ಕಾರಟ್ ಹೇಳಿದ್ದಾರೆ.

ಸಿಪಿಎಂನ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಿಟ್ ಬ್ಯೂರೊ ಸದಸ್ಯರೂ ಆಗಿರುವ ಕಾರಟ್ ನಿನ್ನೆ ಇಲ್ಲಿ ಆಯೋಜನೆಗೊಂಡಿದ್ದ ಅಕ್ಟೋಬರ್ ಕ್ರಾಂತಿಯ ಶತಮಾನೋತ್ಸವ ವರ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಕ್ಟೋಬರ್ ಕ್ರಾಂತಿ, ಸಾಮ್ರಾಜ್ಯ ಶಾಹಿ ಆಳ್ವಿಕೆಯನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಲು ಕಾರಣವಾಯಿತು. ರಷ್ಯಾ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿಯು ಇದರಿಂದಾಗಿಯೇ ಪ್ರಜಾಪ್ರಭುತ್ವದ ಗಾಳಿ ಬೀಸಲಾರಂಭಿಸಿತು ಎಂದು ಅಕ್ಟೋಬರ್ ಕ್ರಾಂತಿಯ ಮಹತ್ವದ ಬಗ್ಗೆ ಕಾರಟ್ ಹೇಳಿದರು.

ಈಗ ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅಮೆರಿಕಾದ ಕಿರಿಯ ಪಾಲುದಾರನಾಗಿ ದೇಶದ ಸಮಗ್ರತೆಗೆ ಬೆದರಿಕೆ ಒಡ್ಡಿದೆ ಎಂದರು.

ದೇಶದ ಸ್ವಾತಂತ್ರ್ಯಕ್ಕೆ ಸಿಪಿಎಂ ಭಾರಿ ತ್ಯಾಗ ಮಾಡಿದೆ. ಆದರೆ, ಆರ್‌ಎಸ್‌ಎಸ್ ಮಾಡಿದ್ದೇನು ಎಂದೂ ಪ್ರಶ್ನಿಸಿದರು.

ಕಾರಟ್ ಜೊತೆಯಲ್ಲಿ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ರಾವ್ ಸರ್ಕಾರ ಮತ್ತು ತ್ರಿಪುರ ರಾಜ್ಯದ ಸಿಪಿಎಂ ಕಾರ್ಯದರ್ಶಿ ಬಿಜನ್ ಧರ್‌ರವರೂ ಜಾತ್ಯಾತೀತ ಶಕ್ತಿಗಳ ಒಗ್ಗೂಡುವಿಕೆಯ ಅಗತ್ಯ ಕುರಿತು ಮಾತನಾಡಿದರು.

Leave a Comment