ಆಯೋಧ್ಯೆ ವಿವಾದ ಬಗೆಹರಿಸಲು ಮೋದಿ, ವಾಜಪೇಯಿ ಏನೂ ಮಾಡಲಿಲ್ಲ; ಪುರಿ ಶಂಕರಾಚಾರ್ಯ ಶ್ರೀ

ಹೈದರಾಬಾದ್, ನ 19- ಅಯೋಧ್ಯೆ ರಾಮಜನ್ಮ ಭೂಮಿ – ಬಾಬ್ರಿ ಮಸೀದಿ ಭೂ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಏನೂ ಮಾಡಲಿಲ್ಲ, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಆಡಳಿತಾವಧಿಯಲ್ಲಿಯೇ ಆಯೋಧ್ಯೆ … ಶ್ರೀ ರಾಮಚಂದ್ರನಿಗೆ ಸೇರಿದ್ದು ಎಂಬುದು ಸ್ಪಷ್ಟವಾಗಿತ್ತು ಎಂದು ಪುರಿ ಗೋವರ್ಧನ ಪೀಠಂ ಪೀಠಾಧ್ಯಕ್ಷ ಜಗದ್ಗುರು ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಮಹಾರಾಜ್ ಹೇಳಿದ್ದಾರೆ.

ಅವರು ಸೋಮವಾರ ನಗರ ಶಿವಾರು ಮಣಿಕೊಂಡ ಪುರಸಭೆ ವ್ಯಾಪ್ತಿಯೊಳಗಿನ ಶ್ರೀ ಚಂದ್ರಮೌಳೀಶ್ವರ, ಶ್ರೀವೆಂಕಟೇಶ್ವರಸ್ವಾಮಿ, ಶ್ರೀ ಸತ್ಯನಾರಾಯಣ ಸ್ವಾಮಿ ಮತ್ತು ಶ್ರೀ ಶಾರದಾಮತ (ಗೋಲ್ಡನ್ ಟೆಂಪಲ್) ದೇವಾಲಯಗಳಿಗೆ ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ. ವಾಜಪೇಯಿ ಪ್ರಧಾನಿಯಾಗಿದ್ದಾಗ, ಅವರು ಒಮ್ಮೆಯೂ ರಾಮ ಮಂದಿರದ ಬಗ್ಗೆ ಮಾತನಾಡಲಿಲ್ಲ. ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಾದಿ ಸುಗಮವಾಗಿದೆ ಎಂದು ಎಲ್ಲಾ ಹಿಂದೂಗಳು ಸಂತೋಷಪಡಬೇಕು. ದೇಶದಲ್ಲಿ ಆದಿ ಶಂಕರರು ಸ್ಥಾಪಿಸಿದ ನಾಲ್ಕು ಜಗದ್ಗುರು ಪೀಠಗಳು ಮಾತ್ರ ಧರ್ಮ ನಿಷ್ಟೆಯಿಂದ ಅನಾದಿ ಕಾಲದಿಂದ ನಡೆದು ಬಂದಿರುವ ಪಾರಂಪರಿಕ ಧಾರ್ಮಿಕ ದಿಶಾನಿರ್ದೇಶನ ಮಾಡುತ್ತಿವೆ ಎಂದು ಹೇಳಿದರು.

Leave a Comment