ಆಯುರ್ವೇದ ಚಿಕಿತ್ಸೆಯಿಂದ ಪೈಲ್ಸ್ ನಿವಾರಣೆ

ಪೈಲ್ಸ್ ಬಂದರೆ ಜೀವವನ್ನೆ ಹಿಂಡಿ ಹಾಕುತ್ತದೆ. ಇದು ಪ್ರಮುಖ ಆರೋಗ್ಯ ಸಮಸ್ಯೆಯೂ ಹೌದು. ದೈನಂದಿನ  ಒತ್ತಡದ ಜೀವನ, ಆಹಾರ ಕ್ರಮ ಮತ್ತು ಜೀವನ ಶೈಲಿ ಹೆಚ್ಚಿನ ಜನರನ್ನು ಕಾಡಲು ಪ್ರಮುಖ ಕಾರಣ. ಪೈಲ್ಸ್ ಸಮಸ್ಯೆ ನಿವಾರಣೆಗೆ ಹಲವಾರು ವಿಧಾನಗಳು ಇವೆ.

ಗುದನಾಳ ಮತ್ತು ಗುದದ್ವಾರದಲ್ಲಿ ಭಾರೀ ನೋವು, ಊತ ಮತ್ತು ಉರಿಯೂತ ಕಂಡುಬರುವಂತಹ ಸಮಸ್ಯೆಯೇ ಪೈಲ್ಸ್. ಆದರೆ ಆಯುರ್ವೇದವು ತುಂಬಾ ಪರಿಣಾಕಾರಿ ಚಿಕಿತ್ಸೆಯಾಗಿದೆ.  ಈ ಚಿಕಿತ್ಸೆಯಿಂದ  ಯಾವುದೇ ಅಡ್ಡಪರಿಣಾಮವಾಗುವುದಿಲ್ಲ.

ಪೈಲ್ಸ್ ಬರಲು ಹಲವಾರು  ಕಾರಣಗಳಿವೆ. ಇದಕ್ಕೆ ಕಾರಣವೆಂದರೆ ಅನುವಂಶೀಯ ಪ್ರವೃತ್ತಿ(ದುರ್ಬಲ ಗುದನಾಳಗಳು ಮತ್ತು ಗೋಡೆಗಳು) ಮತ್ತು ಗುದನಾಳದ ಸುತ್ತಲು ಇರುವಂತಹ ದುರ್ಬಲ ಸ್ನಾಯುಗಳಿಂದ, ಮಲಬದ್ಧತೆ(ಗಟ್ಟಿಯಾದ ಮಲ)ಯಿಂದ ಬರುತ್ತದೆ.  ಬೊಜ್ಜು, ಚಟುವಟಿಕೆ ಇಲ್ಲದ ಮತ್ತು ಜಡ ಜೀವನಶೈಲಿ, ದೀರ್ಘಕಾಲದ ಕೆಮ್ಮು, ಗರ್ಭಧಾರಣೆ, ಅತಿಯಾಗಿ ವಿರೇಚಕ ಅಥವಾ ಎನಿಮಾ ಬಳಕೆ, ದಿನನಿತ್ಯವು ಭಾರ ಎತ್ತುವುದರಿದಲೂ ಪೈಲ್ಸ್  ಬರುತ್ತದೆ.  ಪೈಲ್ಸ್ಗೆ ಆಯುರ್ವೇದ ಚಿಕಿತ್ಸೆ ಉತ್ತಮವಾಗಿದೆ.

health-4h7

ಪೈಲ್ಸ್ ಎಲ್ಲಿ ಕಾಣಿಸಿಕೊಂಡಿದೆ ಎನ್ನುವುದರ ಮೇಲೆ ಅದರ ಲಕ್ಷಣಗಳು ಅಲವಂಬಿಸಿದೆ. ಲಕ್ಷಣಗಳ ಅವಧಿ ಮತ್ತು ನಿಮ್ಮ ಸಂಪೂರ್ಣ ಆರೋಗ್ಯ ಮುಖ್ಯವೆನಿಸುತ್ತದೆ.  ಬಾಹ್ಯ ಪೈಲ್ಸ್ ಗುದದ್ವಾರದ ಹೊರಗಡೆ ಊತ, ಕಿರಿಕಿರಿ ಮತ್ತು ತುರಿಕೆ ಉಂಟು ಮಾಡುವುದು. ಇನ್ನು ಕೆಲವು ಜನರು ತೀವ್ರ ನೋವಿನಿಂದ ಬಳಲುತ್ತಾರೆ.  ಆದರೆ ಇಲ್ಲಿ ರಕ್ತಸ್ರಾವ ಇರುವುದಿಲ್ಲ. ಆಂತರಿಕ ಪೈಲ್ಸ್ ನ ವೇಳೆ ಕಠಿಣ ಮಲವು ಹೊರಗೆ ಬರುವಾಗ ರಕ್ತಸ್ರಾವ ಉಂಟಾಗುವುದು. ಆದರೆ ಇಲ್ಲಿ ನೋವು ಬರುವುದಿಲ್ಲ.  ಈ ವೇಳೆ ಪೈಲ್ಸ್ ನಿಂದ ಸ್ವಲ್ಪ ಕೀವು ಹೊರಗೆ ಬರುತ್ತದೆ.  ಮಲ ವಿಸರ್ಜನೆ ವೇಳೆ ರಕ್ತಸ್ರಾವವು ಆಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯಬೇಕು.

ಪೈಲ್ಸ್ ಗೆ ಪ್ರಮುಖವಾಗಿ ಕಾರಣವಾಗುವಂತಹ ಮಲಬದ್ಧತೆಯನ್ನು ನಿವಾರಣೆ ಮಾಡುವುದು ಪೈಲ್ಸ್ ಗೆ ಆಯುರ್ವೇದದ ಚಿಕಿತ್ಸೆಯ ಮೊದಲ ಗುರಿ ಮತ್ತು ಇದು ಅದಕ್ಕೆ ಸಂಬಂಧಿಸಿದ ನೋವು ಕಡಿಮೆ ಮಾಡುವುದು. ಹೆಚ್ಚಿನ ಸಮಯದಲ್ಲಿ ಪೈಲ್ಸ್ ಗೆ ಚಿಕಿತ್ಸೆ ಎಂದರೆ ಜೀವನಶೈಲಿ ಬದಲಾವಣೆ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

ಆಯುರ್ವೇದ ಔಷಧಿ ತೆಗೆದುಕೊಂಡರೆ ಆಗ ಮಲಬದ್ಧತೆ ಮತ್ತು  ಪೈಲ್ಸ್ ನಿವಾರಣೆಗೆ ಇದು ತುಂಬಾ ಸಹಕಾರಿಯಾಗಲಿದೆ. ಪೈಲ್ಸ್ ಗೆ ಇರುವಂತಹ ಕೆಲವೊಂದು ಸಾಮಾನ್ಯ ಗಿಡಮೂಲಿಕೆಗಳು ಮತ್ತು ಔಷಧಿಗಳಿವೆ.  ಇಂಗು, ಜೀರಿಗೆ, ತುಪ್ಪ, ಮಜ್ಜಿಗೆ ಮತ್ತು ಹಸಿರೆಲೆ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಮಲಬದ್ಧತೆ ತಡೆಗಟ್ಟಬಹುದಾಗಿದೆ.

health-4h1ಕ್ಯಾರೆಟ್, ಪೈಲ್ಸ್ ನಿಂದ ಉಂಟಾಗುವ ರಕ್ತಸ್ರಾವ ತಡೆಯಬಹುದಾಗಿದೆ. ಆದ್ದರಿಂದ Pಹಸಿ ಕ್ಯಾರೆಟ್  ಅಥವಾ ಬೇಯಿಸಿ ಸೇವಿಸಬಹುದು.

ಬೆಳ್ಳುಳ್ಳಿ ಪೈಲ್ಸ್ ನಿಂದ ಉಂಟಾಗುವ  ರಕ್ತಸ್ರಾವ ಕಡಿಮೆ ಮಾಡಲು ಇದು ತುಂಬಾ ಉಪಯುಕ್ತ.  ರಕ್ತಸ್ರಾವವಾಗುವ ಪೈಲ್ಸ್ ನ ಬೆಳವಣಿಗೆ ನಿವಾರಿಸಲು  ನೆರವಾಗುವುದು. ಪೈಲ್ಸ್ ನಿವಾರಣೆ ಮಾಡಲು ಇರುವಂತಹ ಇತರ ಕೆಲವು ಗಿಡಮೂಲಿಕೆಗಳೆಂದರೆ ಮಿಮೋಸಾ ಪುಡಿಕಾ, ಅಲೈಂತಸ್ ಎಕ್ಸೆಲಾ, ಬ್ಲೂಮಿಯ ಬಲ್ಸಾಮಿಫೆರಾ ಮತ್ತು ಸೆಮಕಾರ್ಪಸ್ ಅನಾಕಾರ್ಡಿಯಮ್.

ಆಯುರ್ವೇದ ಚಿಕಿತ್ಸೆ ಮೂಲಕ ಪೈಲ್ಸ್ ಗೆ ಸಂಬಂಧಿಸಿದ ನೋವು ಮತ್ತು ತೊಂದರೆ ಕಡಿಮೆ ಮಾಡಿಕೊಳ್ಳಲು ಅವಕಾಶವಿದೆ.  ನೀವು ಈಗಾಗಲೇ ಪೈಲ್ಸ್ ಗೆ ಮನೆಮದ್ದು ಮತ್ತು ಸ್ವಚಿಕಿತ್ಸೆ ಮಾಡಿದ್ದರೆ ಅದು ಯಾವುದೇ ಪರಿಣಾಮ ಬೀರದೆ ಇದ್ದರೆ ಆಗ ನೀವು ಆಯುರ್ವೇದ ವೈದ್ಯರು ಅಥವಾ ಅಲೋಪತಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದರೆ ಪೈಲ್ಸ್ ಗುಣವಾಗುವುದರಲ್ಲಿ ಎರಡು ಮಾತಿಲ್ಲ.

Leave a Comment