ಆಯುಕ್ತರ ವರ್ಗಾವಣೆ- ಶಾಸಕ, ಸಚಿವರ ನಿರ್ಣಯಕ್ಕೆ ಬದ್ಧ

ಧಾರವಾಡ,ಆ.14-  ಹು‌-ಧಾ ಮಹಾನಗರಪಾಲಿಕೆ ಆಯುಕ್ತರನ್ನು ವರ್ಗಾಯಿಸುವಂತೆ ಪಾಲಿಕೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿರುವ ಕೆಪಿಸಿಸಿ ಸದಸ್ಯ ದೀಪಕ್ ಚಿಂಚೋರೆ ಅವರು,  ಆಯುಕ್ತರ ವರ್ಗಾವಣೆಗೆ ತಾವು ಒತ್ತಾಯಿಸದಿದ್ದರೂ ಕೆಲ ಮಾಧ್ಯಮಗಳು ತಮ್ಮ ಹೆಸರು ತೆಗೆದುಕೊಂಡು ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ  ಎಂದು ಕಿಡಿಕಾರಿದರು.
ಈ ಕುರಿತು ವರದಿಗಾರರೊಂದಿಗೆ ಮಾತನಾಡಿದ ಅವರು, ಆಯುಕ್ತರ ವರ್ಗಾವಣೆಗೆ ಒತ್ತಾಯಿಸುವುದಕ್ಕೂ ಮತ್ತು ತಮಗೂ ಯಾವುದೇ ಸಂಬಂಧವಿಲ್ಲ. ಮೇಜರ್  ಸಿದ್ದಲಿಂಗಯ್ಯ ಹಿರೇಮಠ ಅವರು ಇದ್ದರು ಅಷ್ಟೇ, ಅವರಲ್ಲದೇ ಬೇರೆ ಯಾರೋ ಆಯುಕ್ತರಾಗಿ ಬಂದರು ಅಷ್ಟೇ. ಆದರೆ ಮಿಲಟರಿ ಶಿಕ್ಷಣ ಪಡೆದು, ಮಿಲಿಟರಿ ಅಧಿಕಾರಿಯಾಗಿ ಅನುಭವ ಹೊಂದಿರುವ ಅವರು ಜನಸಾಮನ್ಯರೊಂದಿಗೆ ಬೆರೆತು ಅಭಿವೃದ್ಧಿ ಆಡಳಿತ ನಡೆಸುವಲ್ಲಿ ತಕ್ಕಮಟ್ಟಿಗೆ ಹೊಂದಾಣಿಕೆ ಕೊರತೆ ಇದ್ದು ಬಡ ಜನತೆಯೊಂದಿಗೆ ಬೆರೆತು ಅವರಿಗೆ  ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಹಿನ್ನೆಡೆ  ಆಗುತ್ತದೆ ಎಂಬುದಷ್ಟೇ ತಮ್ಮ ಅನಿಸಿಕೆ ಎಂದರು.
ಈ ಹಿನ್ನೆಲೆಯಲ್ಲಿ ಅವಳಿನಗರದ ಅಭಿವೃದ್ಧಿಗೋಸ್ಕರ ಆಡಳಿತಾತ್ಮಕವಾಗಿ ಪಕ್ಷದ ಮುಂಡರಾದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಶಾಸಕರಾದ ಪ್ರಸಾದ ಅಬ್ಬಯ್ಯ ಮತ್ತು ಶ್ರೀನಿವಾಸ ಮಾನೆ ಅವರು ಯಾವುದೇ ರೀತಿಯ ಕ್ರಮ ಕೈಗೊಂಡರು ತಾವು ಬದ್ದರಾಗಿರುವುದಾಗಿ ಹೇಳಿದರು.

Leave a Comment