ಆಭರಣ ಮೇಳದ ಪೂರ್ವಭಾಗಿ ನಡೆದ ಫ್ಯಾಷನ್ ಶೋ

ಬೆಂಗಳೂರು, ಫೆ 18- ಶಿವರಾತ್ರಿ ಅಂಗವಾಗಿ ನಗರದ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಆಯೋಜಿಸಿರುವ ದಿ ಬೆಂಗಳೂರು ಜುವೆಲ್ಲರಿ ಶೋನ ಪೂರ್ವಭಾಗಿಯಾಗಿ ನಗರದ ಪ್ರೆಸ್‌ಕ್ಲಬ್‌ನಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು.

ಎಚ್‌ಎಸ್‌ಆರ್ ಬಡಾವಣೆಯ ವೈಟ್ ಹೌಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಇದೇ ಫೆ 22 ರಿಂದ 24ರವರೆಗೆ ದಿ ಬೆಂಗಳೂರು ಜುವೆಲ್ಲರಿ ಶೋ ನಡೆಯಲಿದ್ದು, ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಅವರ ಅಭಿರುಚಿಗೆ ತಕ್ಕ ನವ ನವೀನ ಆಭರಣಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

f3

ಮಹಿಳಾ ಉದ್ಯಮಿಗಳಿಂದ ಒಂದೇ ಸೂರಿನಡಿ ವಿಶಿಷ್ಠ, ವೈವಿಧ್ಯಮಯ, ವಿನೂತನ ವಿನ್ಯಾಸದ ಆಭರಣಗಳ ಪ್ರದರ್ಶನವ ಜೊತೆಗೆ ಶಿವರಾತ್ರಿ ಅಂಗವಾಗಿ ಇದೆ ಮೊದಲ ಬಾರಿಗೆ ರುದ್ರಾಕ್ಷಿಗಳಿಂದಲೇ ವಿನ್ಯಾಸಗೊಳಿಸಿದ ಆಭರಣಗಳು ಪ್ರದರ್ಶನದ ಮೆರಗು ಹೆಚ್ಚಿಸಲಿವೆ. ವಿಶೇಷವಾಗಿದೆ ಹಿಮಾಲಯದಿಂದ ತರಿಸಲಾದ ಹಲವು ವಿಧದ ರುದ್ರಾಕ್ಷಿಗಳ ವಿನ್ಯಾಸದಲ್ಲಿ ಆಭರಣಗಳನ್ನು ತಯಾರಿಸಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.

ಆಭರಣ ಪ್ರದರ್ಶನಕ್ಕೂ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪೂರ್ವಭಾವಿಯಾಗಿ ನಡೆದ ಸಿಕ್ಸ್ ಟು ಸಿಕ್ಸ್ ಟಿ ಫ್ಯಾಷನ್ ಶೋ ನಲ್ಲಿ ೬ ವರ್ಷದ ಮಕ್ಕಳಿಂದ ೬೦ ವರ್ಷದ ಮಹಿಳೆಯರು ಗಮನ ಸೆಳೆದರು. ಎಲ್ಲಾ ವಯೋಮಾನದವರು ಆಭರಣಗಳನ್ನು ತೊಟ್ಟು ಹೆಜ್ಜೆ ಹಾಕಿದರು. ವಿಶಿಷ್ಠ ಆಭರಣಗಳನ್ನು ಧರಿಸಿದ ಚಿತ್ರನಟಿ ಸೋನಿಕಗೌಡ, ಮಿಸಸ್ ವರ್ಲ್ಡ್ ಶೃತಿಚೇತನ್‌ಗೌಡ ಹಾಗೂ ರೂಪದರ್ಶಿಯರು ಮಿರ ಮಿರ ಮುಂಚುವ ಆಭರಣಗಳನ್ನು ಧರಿಸಿ ವಯ್ಯಾರದ ಹೆಜ್ಜೆಯೊಂದಿಗೆ ಪ್ರದರ್ಶನದ ಮೆರಗು ಹೆಚ್ಚಿಸಿದರು.

f2

ಚಿತ್ರನಟಿ ಸೋನಿಕಾ ಗೌಡ ಮಾತನಾಡಿ, ಈ ಆಭರಣ ಪ್ರದರ್ಶನ ಅತ್ಯಂತ ವಿನೂತನವಾಗಿದ್ದು, ಎಲ್ಲರಿಗೂ ಕೈಗೆಟುಕುವ, ಎಲ್ಲಾ ವಯೋಮಾನದವರೂ ಒಪ್ಪುವ ಪ್ರದರ್ಶನವಾಗಿದೆ. ಬೆಂಗಳೂರಿನ ಆಭರಣ ಪ್ರಿಯರಿಗೆ ಇದು ನಿಜಕ್ಕೂ ಆಭರಣ ಹಬ್ಬವಾಗಿದ್ದು, ಆಭರಣ ಉತ್ಸವಕ್ಕೆ ಸ್ನೇಹಿತರು, ಬಂಧು ಬಳಗವನ್ನು ಕರೆತಂದು ಸಂಭ್ರಮಿಸುವಂತೆ ಮನವಿ ಮಾಡಿದರು.

ಬೆಂಗಳೂರು ಜುವೆಲ್ಲರಿ ಸಂಗೀತಾ ವಲೆಚಾ ಮತ್ತು ಸನಮ್ ಡೆಂಬ್ಲಾ ಅವರ ಕೂಸು. ಚಿಲ್ಲರೆ ಆಭರಣ ಮಾರುಕಟ್ಟೆ ಮತ್ತು ಪ್ರದರ್ಶನ ವಲಯದಲ್ಲಿ ಈ ತಾಯಿ ಮತ್ತು ಮಗಳ ಯಾನಕ್ಕೆ ಎರಡು ದಶಕಗಳ ಇತಿಹಾಸವಿದೆ.

Leave a Comment