ಆಫ್ಘಾನಿಸ್ತಾನ: ವಿದೇಶಿ ಸೇನಾ ವಾಹನ ಸ್ಫೋಟ, 7 ಮಂದಿ ಸಾವು

 ಕಾಬೂಲ್, ನ 13 – ವಿದೇಶಿ ಸೇನಾ ಸಿಬ್ಬಂದಿಯನ್ನು ಹೊತ್ತ ವಾಹನವೊಂದು ಬುಧವಾರ ಇಲ್ಲಿ ಸ್ಫೋಟಗೊಂಡ ಪರಿಣಾಮ ಮಂದಿ ಸಾವನ್ನಪ್ಪಿದ್ದು, ಇತರ 10 ಮಂದಿ ಗಾಯಗೊಂಡಿದ್ದಾರೆ.

ಗಾರ್ಡಾ ವರ್ಲ್ಡ್ ಎಂಬ ವಿದೇಶಿ ಭದ್ರತಾ ಕಂಪನಿಗೆ ಸೇರಿದ ವಾಹನಕ್ಕೆ ಕಾರ್ ಬಾಂಬ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ, ಏಳು ಆಫ್ಘನ್‍ ನಾಗರಿಕರು ಮೃತಪಟ್ಟಿದ್ದು, ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ 10 ಜನರು ಗಾಯಗೊಂಡಿದ್ದಾರೆ  ಎಂದು ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಸತ್ತವರು ಮತ್ತು ಗಾಯಗೊಂಡವರಲ್ಲಿ ಮಕ್ಕಳೂ ಸೇರಿದ್ದಾರೆ.

ಮೃತ ಏಳು ಜನರಷ್ಟೇ ಅಲ್ಲದೆ, ಅನೇಕ ನಾಗರಿಕರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಕಾಬೂಲ್ ನಗರದ ಕ್ವಸಾಬ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 7.25 ಗಂಟೆಗೆ ಸ್ಫೋಟ ಸಂಭವಿಸಿದೆ ಎಂದು ರಹೀಮಿ ಹೇಳಿದ್ದಾರೆ

ಸ್ಫೋಟದಿಂದ ಈ ಪ್ರದೇಶದಲ್ಲಿ ಹಲವಾರು ವಾಹನಗಳು ಹಾನಿಗೊಂಡಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

 ಸ್ಫೋಟದ ಸ್ಥಳದಲ್ಲಿ ಅನೇಕ ಸರ್ಕಾರಿ ಕಚೇರಿಗಳು ಮತ್ತು ಹಲವು ವಿದೇಶಿ ಎನ್‌ಜಿಒಗಳಿವೆ. ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತಿಲ್ಲ. .

 ಅಧ್ಯಕ್ಷ ಅಶ್ರಫ್ ಘನಿ ಅವರ ಕಚೇರಿ, ಸ್ಫೋಟ ದಾಳಿಯನ್ನು ಖಂಡಿಸಿ, ಈ ಕೃತ್ಯ ಮಾನವೀಯತೆಯ ವಿರುದ್ಧದ ಅಪರಾಧ ಎಂದು ಹೇಳಿದೆ.

Leave a Comment