ಆಪಲ್ ಕೇಕ್ಗೆ ಯು/ಎ ಸರ್ಟಿಫಿಕೇಟ್

ಅರವಿಂದ್ ಕುಮಾರ್ ನಿರ್ಮಿಸುತ್ತಿರುವ ‘ಆಪಲ್ ಕೇಕ್ ಚಿತ್ರ ಲವ್, ಸೆಂಟಿಮೆಂಟ್, ಫ್ರೆಂಡ್‌ಶಿಪ್, ಮದರ್ ಸೆಂಟಿಮೆಂಟ್ ಅಂಶಗಳನ್ನು ಒಳಗೊಂಡಿರುವ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದೆ.
ಈ ಹಿಂದೆ ಮದರಂಗಿ, ವಾಸ್ಕೋಡಗಾಮ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ರಂಜಿತ್ ಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ಇದೇ ತಿಂಗಳಲ್ಲಿ ನೆರವೇರಲಿದೆ. ಚಿತ್ರವನ್ನು ಬೆಂಗಳೂರು, ಮಂಗಳೂರು, ಹಾವೇರಿ, ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದು ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ಶ್ರೀಧರ್ ಕಶ್ಯಪ್ ಸಂಗೀತ, ಎ.ಆರ್. ನಿರಂಜನ್‌ಬಾಬು ಛಾಯಾಗ್ರಹಣವಿದೆ.ತಾರಾಬಳಗದಲ್ಲಿ ವಿಜಯಶಂಕರ್ ಅರವಿಂದ್, ರಂಜಿತ್, ಕೃಷ್ಣ, ಶುಭಾ ರಕ್ಷಾ, ಚೈತ್ರಾ ಶೆಟ್ಟಿ, ರಂಗಸ್ವಾಮಿ, ಹರಿಚಂದ್ರ, ಆಂಜನಪ್ಪ, ಜ್ಯೋತಿ ಮೂರೂರು, ವಿಶಾಲ್, ಬಳ್ಳಾರಿ ಮಂಜು, ಶೈಲೇಶ್ ಇನ್ನು ಮುಂತಾದವರಿದ್ದಾರೆ.

Leave a Comment