ಆಪರೇಷನ್ ಕಮಲ ಇನ್ನೂ ನಿಂತಿಲ್ಲ : ಸಿಎಂ

ಬೆಂಗಳೂರು, ಜೂ. ೨೦- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಆಸ್ಥಿರಗೊಳಿಸುವ ಆಪರೇಷನ್ ಕಮಲದ ಚಟುವಟಿಕೆಗಳು ಇನ್ನೂ ನಿಂತಿಲ್ಲ. ಇವತ್ತಿಗೂ ಅಂತಹ ಚಟುವಟಿಕೆಗಳು ನಡೆಯುತ್ತಲೆ ಇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಸಮ್ಮಿಶ್ರ ಸರ್ಕಾರದ ಒಂದ ವರ್ಷದ ಸಾಧನೆಯನ್ನು ವಿವರಿಸುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ವ್ಯರ್ಥ ಪ್ರಯತ್ನವನ್ನು ಬಿಜೆಪಿ ನಡೆಸುತ್ತಲೇ ಬಂದಿದೆ. ಇಂದೂ ಸಹ 7-8 ಶಾಸಕರು ರಾಜೀನನಾಮೆ ನೀಡುತ್ತಾರೆ ಎಂಬ ಸುದ್ದಿಯನ್ನು ಬಿತ್ತಿತ್ತು. ಅದು ಸಾಧ್ಯವಾಗಿಲ್ಲ. ಸರ್ಕಾರ ಉರುಳಿಸಲು ಬೇಕಾದ ಸಂಖ್ಯಾಬಲವನ್ನು ಮುಟ್ಟಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು..
ವಿರೋಧ ಪಕ್ಷದ ನಾಯಕರಾಗಿರುವ ಯಡಿಯೂರಪ್ಪನವರು ಯಾವ ಶಾಸಕರಿಗೆ ಆಮಿಷ ಒಡ್ಡಿದ್ದೇವೆ ಎಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗಪಡಿಸಬೇಕು ಎಂದು ಹೇಳಿದ್ದನ್ನು ಗಮನಿಸಿದ್ದೆನೆ. ಶಾಸಕರಿಗೆ ಆಮಿಷ ಒಡ್ಡಿದ ಆಡಿಯೋ ಇದೆ. ಈ ಬಗ್ಗೆ ಹೆಚ್ಚು ಹೇಳಲ್ಲ ಮಾಧ್ಯಮದವರಿಗೆ ಎಲ್ಲವೂ ಗೊತ್ತಿದೆ ಎಂದರು.
ಸರ್ಕಾರ ಬೀಳಿಸುವ ಮಾಹಿತಿಗಳು ನಿಮಗೆ ಹೆಚ್ಚು ಗೊತ್ತಿವೆ. ಆದರೆ ಈಗ ಆ ಸುದ್ದಿಗಳನ್ನು ನೀವು ನಂಬುತ್ತಿಲ್ಲ ಎಂದು ಮಾಧ್ಯಮದವರನ್ನು ಕುರಿತು ಹೇಳಿ, ಈ ಸರ್ಕಾರ ಸುಭದ್ರವಾಗಿದೆ ಎಂದರು.

Leave a Comment