ಆಪರೇಷನ್ ಕಮಲಕ್ಕೆ ಎಂಟಿಬಿ ಹಣ : ಸಿದ್ದು

ಮೈಸೂರು. ನ ೨೧-ಆಪರೇಷನ್ ಕಮಲದಲ್ಲಿ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ. ಬದಲಾಗಿ ಅವರೇ ನೀಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಅಪರೇಷನ್ ಕಮಲಗೆ ಹಣ ನೀಡಿದ್ದಕ್ಕೆ ಎಂಟಿಬಿ ನಾಗರಾಜ್ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪಗೆ ಪ್ರೀತಿ, ಹೀಗೆ ಮಾಡಿರೋದು ಎಂಟಿಬಿ ನಾಗರಾಜ್ ಒಬ್ಬನೇ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಂತೂ ಎಂಟಿಬಿ ನಾಗರಾಜ್ ಅವರನ್ನು ಗೆಲ್ಲಿಸುವ ಉತ್ಸಾಹ ದಲ್ಲಿದ್ದಾರೆ. ಎಂಟಿಬಿ ಅವರು ಪ್ರಾಮಾಣಿಕ ವ್ಯಕ್ತಿ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾನು ಎಂಟಿಬಿ ನಾಗರಾಜ್ ಬಳಿ ಸಾಲವನ್ನು ಪಡೆದಿಲ್ಲ. ಹೀಗಾಗಿ ನಾನು ಸಾಲ ಪಡೆಯದೇ ಏನ್ ವಾಪಸ್ ನೀಡಲಿ. ಕೃಷ್ಣೇ ಭೈರೇಗೌಡ ಪಡೆದಿದ್ದ ಸಾಲವನ್ನು ವಾಪಸ್ ನೀಡಿದ್ದಾರೆ ಎಂದು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.

ಇದೇ ವೇಳೆ ಅನರ್ಹ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಹಣದಾಸೆಗೆ ಅನರ್ಹ ಶಾಸಕರು ಹೋಗಿದ್ದಾರೆಂದು ಜನ ಚರ್ಚಿಸುತ್ತಿದ್ದಾರೆ. ಪ್ರಚಾರದ ವೇಳೆ ನಾನು ಬರೀ ಪ್ರಶ್ನೆಗಳನ್ನೇ ಕೇಳುತ್ತೇನೆ. ಜನರಿಗೆ ಗೊತ್ತಿದೆ. ಅವರು ಉತ್ತರಿಸುತ್ತಿದ್ದಾರೆ. ಅನರ್ಹರನ್ನ ಜನ ಸಹಿಸಲ್ಲ. ಸೋಲಿಸುತ್ತಾರೆ. ಇವರ ವಿನಯದ ಸುಳ್ಳನ್ನ ಜನ ನಂಬಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

ಕಾಂಗ್ರೆಸ್ ನಾಯಕರು ನನ್ನ ಬಳಿ ಸಾಲ ಪಡೆದಿದ್ದಾರೆ. ನಾನು ಅವರ ಋಣದಲ್ಲಿಲ್ಲ. ಅವರು ನನ್ನ ಋಣದಲ್ಲಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದರು ಎಂದು ಸಿದ್ದರಾಮಯ್ಯ ನುಡಿದರು.

Leave a Comment