ಆಪರೇಷನ್ ಆಡಿಯೋ ನಿಜ- ಸಾಬೀತಾಗದಿದ್ರೆ ರಾಜಕೀಯದಿಂದ ನಿವೃತ್ತಿ

ಮಂಜುನಾಥನ ಸನ್ನಿಧಿಯಲ್ಲಿ ಸಿಎಂ ಮತ್ತೊಂದು ಶಪಥ
ಧರ್ಮಸ್ಥಳ;
ಅಪಚಾರ ಎಸಗಿದ್ರೆ ಧರ್ಮಸ್ಥಳ ಮಂಜುನಾಥಸ್ವಾಮಿ ಬಿಡಲ್ಲ. ಮಂಜುನಾಥಸ್ವಾಮಿ ಜತೆ ಚೆಲ್ಲಾಟವಾಡಬಾರದು. ೧೨ ವರ್ಷಗಳ ಹಿಂದೆ ಅಪಚಾರವೆಸಗಿದ್ದೆ ಎಂದು ಹೇಳಿದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಮಾಣ ಮಾಡಿದ್ದಾರೆ.

ಶನಿವಾರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಜೆಟ್ ಗೂ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿರೋದು ಬಿಎಸ್ ಯಡಿಯೂರಪ್ಪ ಅವರ ಧ್ವನಿಯೇ ಆಗಿದೆ. ಒಂದು ವೇಳೆ ಈ ವಿಚಾರ ಸಾಬೀತಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಪಥ ಮಾಡಿದರು.
ಆ ಆಡಿಯೋದಲ್ಲಿ ಇರೋದು ಯಡಿಯೂರಪ್ಪ ವಾಯ್ಸೇ ಆಗಿದೆ ಅದು ನಕಲಿ ಆಡಿಯೋ, ಸಾಬೀತಾದರೆ ರಾಜಕೀಯ ನಿವೃತ್ತಿ ನೀಡುವೆ ಎಂದರು.

ಆಪರೇಷನ್ ಕಮಲ ಸಂಭಾಷಣೆ ನಿಜ:ಯುಟಿ ಖಾದರ್
ಮಂಗಳೂರು,
ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಬಿಜೆಪಿಯವರು ಆಮಿಷವೊಡ್ಡಿ ಕೊಳ್ಳಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಡುಗಡೆಗೊಳಿಸಿರುವ ಆಡಿಯೋ ಕ್ಲಿಪ್ ಸಂಭಾಷಣೆಯಲ್ಲಿ ಬೇರೆ ಬೇರೆ ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಎರಡು ಮೂರು ಜನ ಮಾತನಾಡಿದ್ದಾರೆ. ಸಂಭಾಷಣೆ ವೇಳೆ ಸ್ಪೀಕರ್, ಪ್ರಧಾನಿ, ಜಡ್ಜ್ ಉಲ್ಲೇಖ ಮಾಡಿದ್ದಾರೆ. ಇದೊಂದು ಗಂಭೀರ ವಿಚಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಯಾಗಬೇಕು ಎಂದರು.
ಅಲ್ಲಿ ಸಂಭಾಷಣೆ ನಡೆದಿರುವುದು ನಿಜ. ಅದನ್ನು ಈಗಾಗಲೇ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ.ಈ ಬಗ್ಗೆ ತನಿಖೆ ನಡೆಯಲಿ ಆಮೇಲೆ ಗೊತ್ತಾಗುತ್ತದೆ ಎಂದರು.

Leave a Comment